ಸುಳ್ಯ: ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಹಳೆಗೇಟಿನ ರಾಮ ಭಕ್ತರು ವತಿಯಿಂದ ಹಳೆಗೇಟು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ಶ್ರೀರಾಮ ತಾರಕ ಜಪಯಜ್ಞ ಮತ್ತು
ಶ್ರೀರಾಮ ನಾಮ ಸಂಕೀರ್ತನೆ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ರಾಮ ತಾರಕ ಮಂತ್ರ ಜಪ ಯಜ್ಞ ನಡೆಯಿತು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಶ್ ಹೆಗ್ಡೆ, ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ್,ಕೇಶವ ಮಾಸ್ತರ್ ಹೊಸಗದ್ದೆ, ಚಿದಾನಂದ ವಿದ್ಯಾನಗರ, ಶ್ರೀದೇವಿ ನಾಗರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು.












