ಸುಳ್ಯ: ಸುಳ್ಯದ ರಾಘವೇಂದ್ರ ಮಠದಲ್ಲಿ ತಪ್ತ ಮುದ್ರಾ ಧಾರಣಾ ಕಾರ್ಯಕ್ರಮ ಜೂ.29ರಂದು ನಡೆಯಿತು.
ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣೆ ನಡೆಯಿತು. ರಾಘವೇಂದ್ರ ಮಠಕ್ಕೆ
ಆಗಮಿಸಿದ ಸ್ವಾಮೀಜಿಯವರನ್ನು ಮಠದ ಪದಾಧಿಕಾರಿಗಳು ಸ್ವಾಗತಿಸಿದರು. ಬಳಿಕ ತಪ್ತ ಮುದ್ರಾಧಾರಣಾ ಕಾರ್ಯಕ್ರಮ ಆರಂಭವಾಯಿತು.ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ, ಮಠದ ಅರ್ಚಕರಾದ ಶ್ರೀಹರಿ ಎಳಚಿತ್ತಾಯ, ರವಿರಾಜ ನಾವಡ, ಸಂಚಾಲಕ ಪ್ರಕಾಶ್ ಮೂಡಿತ್ತಾಯ, ಶಿವಳ್ಳಿ ಸಂಪನ್ನದ ಪದಾಧಿಕಾರಿಗಳು, ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.