ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಸಂಸದ ನಳಿನ್ಕುಮಾರ್ ಕಟೀಲ್ ಭಾಗವಹಿಸಿದ್ದರು.
ಸಂಸದರ ಮತ್ತು ಶಾಸಕರ ಅನುದಾನದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ರಸ್ತೆ ಅಗಲೀಕರಣಕ್ಕೆ ಇಂಟರ್ಲಾಕ್ ಅಳವಡಿಕೆಗೆ ರೂ.10 ಲಕ್ಷ ಅನುದಾನ ಕಾಮಗಾರಿಯ
ಗುದ್ದಲಿ ಪೂಜೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಸಂಸದರ 2023-24ನೇ ಸಾಲಿನ ಸರ್ಕಾರ ಪ್ರದೇಶಾಭಿವೃದ್ಧಿ ಅನುದಾನದಿಂದ ನಿರ್ಮಿಸಲಾದ ಬೆಳ್ಳಾರೆ ಮೇಲಿನ ಪೇಟೆ ಆಟೋರಿಕ್ಷಾ ತಂಗುದಾಣದ ಉದ್ಘಾಟನಾ ಕಾರ್ಯಕ್ರಮ ಹಾಗೂ ಬೆಳ್ಳಾರೆ ತಡಗಜೆ ರಸ್ತೆಗೆ ಶಾಸಕರ ಅನುದಾನದಿಂದ ರೂ. 20 ಲಕ್ಷ ಇದರ ಗುದ್ದಲಿ ಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು ಸಂಸದರಾದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ವಾಲ್ತಾಜೆಯ ಶಿರಾಡಿ ನದಿ ಬಳಿ ಹಾಗೂ ಬಲ್ಕಜೆ ಎಂಬಲ್ಲಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ರವರ ರೂ. 7.50 ಲಕ್ಷ ಅನುದಾನದಿಂದ ನಿರ್ಮಿಸುವ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ಶಾಸಕರ ನಿಧಿಯಿಂದ ಎಲಿಮಲೆ, ಮೊಡಂಕ, ಗಟ್ಟಿಗಾರು ರಸ್ತೆ ಕಾಂಕ್ರೀಟೀಕರಣ ರೂ. 30 ಲಕ್ಷ,
ಚಿತ್ತಡ್ಕ ಕಜೆ ಎಂಬಲ್ಲಿ ಎ.ಪಿ.ಎಂ.ಸಿ. ನಿಧಿಯಿಂದ ರೂ. 3 ಲಕ್ಷ, ಮೊಡಂಕ ಕಾಲೋನಿಯಲ್ಲಿ ರಸ್ತೆ ಕಾಮಗಾರಿಗೆ ರೂ. 1 ಲಕ್ಷ
ಕೇಪ್ಲಕಜೆ ಎಂಬಲ್ಲಿ ನೂತನ ಸ್ಮಶಾನ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್ ನಿಧಿಯಿಂದ ರೂ. 5.50 ಲಕ್ಷ, ಜೀರ್ಮುಖಿ ಗಟ್ಟಿಗಾರು ಎಂಬಲ್ಲಿ ರೂ. 2.50 ಲಕ್ಷ, ಎರ್ಮೆಟ್ಟಿ ಕುಕ್ಕುತಗುಂಡಿ ಕೆರೆಮೂಲೆ ರಸ್ತೆ ಕಾಂಕ್ರೀಟೀಕರಣಕ್ಕೆ ಲೋಕಸಭಾ ಸದಸ್ಯರಾದ ನಳಿನ್ಕುಮಾರ್ ಕಟೀಲ್ ರವರ ಸಂಸದರ ನಿಧಿಯಿಂದ ರೂ. 20 ಲಕ್ಷ, ಎರ್ಮೆಟ್ಟಿ ಮಾಪಲಕಜೆ ಬೊಮ್ಮಾರ್ ರಸ್ತೆಯ ಎರ್ಮೆಟ್ಟಿ ಎಂಬಲ್ಲಿ ಶಾಸಕರ ನಿಧಿಯಿಂದ ರೂ. 3 ಲಕ್ಷ, ಪಂಚಾಯತ್ ನಿಧಿಯಿಂದ ರೂ. 2.50 ಲಕ್ಷ, ಕೆರೆಮೂಲೆ ಎಂಬಲ್ಲಿ ರೂ. 2.50 ಲಕ್ಷ
ಬಾಳೆಗುಂಡಿ ಎಂಬಲ್ಲಿ ರೂ. 1.75 ಲಕ್ಷ ಪಂಚಾಯತ್ ನಿಧಿಯಿಂದ ಸೇರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಶ್ರೀನಾಥ್ ರೈ ಬಾಳಿಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.














