ಬನಾರಿ:ದೇಲಂಪಾಡಿ ಊಜಂಪಾಡಿಯ ತರವಾಡು ಮನೆಯಲ್ಲಿ ಧರ್ಮದೈವ ನೇಮೋತ್ಸವದ ಶುಭಸಂದರ್ಭದಲ್ಲಿ ಪೆರುವಡಿ ಸಂಕಯ್ಯ ಭಾಗವತ ವಿರಚಿತ “ಕೃಷ್ಣಾರ್ಜುನ ಕಾಳಗ ” ಯಕ್ಷಗಾನ ತಾಳಮದ್ದಳೆ ಜರುಗಿತು. ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸಹಕಾರದಲ್ಲಿ ಹರಿಶ್ಚಂದ್ರ ಕೆ ಅಡೂರು ಅವರ ಸಂಯೋಜನೆಯೊಂದಿಗೆ ಅಳವಡಿಸಲ್ಪಟ್ಟ ಈ ಸಾಂಸ್ಕೃತಿಕ ತಾಳಮದ್ದಳೆ ಕಾರ್ಯಕ್ರಮವು
ಮಹಾಬಲ ಡಿ.ಎಸ್. ಕೋಟೆಕಾರ್ ಅವರ ನಿರೂಪಣೆಯೊಂದಿಗೆ ಆರಂಭಗೊಂಡಿತು.ಹಿಮ್ಮೇಳದಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಚೆಂಡೆ ಮದ್ದಳೆ ಚಕ್ರತಾಳ ವಾದನದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಭಾಗವಹಿಸಿದರು.ಅರ್ಥಧಾರಿಗಳಾಗಿ ವೆಂಕಟರಮಣ ಭಟ್ಟ ಸುಳ್ಯ, ರಾಧಾಕೃಷ್ಣ ಕಲ್ಚಾರ್, ರಾಮ ಜೋಯಿಸ ಬೆಳ್ಳಾರೆ, ರಾಮಣ್ಣ ಮಾಸ್ತರ್ ದೇಲಂಪಾಡಿ, ರಮಾನಂದ ರೈ ದೇಲಂಪಾಡಿ, ರಾಮ ನಾಯ್ಕ ದೇಲಂಪಾಡಿ ಕಾಣಿಸಿಕೊಂಡರು.

ಈ ಸಂದರ್ಭ ಬನಾರಿ ಕಲಾಸಂಘದ ಕಾರ್ಯದರ್ಶಿ, ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರನ್ನು ಊಜಂಪಾಡಿ ತರವಾಡು ಮನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಒಟ್ಟಾಗಿ ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷರಾದ ಮಹಾಬಲ ಯು.ಕೆ. ಕೇರ್ಪಳ ಅವರು ಕಲಾವಿದರನ್ನು ಶಾಲು ಗೌರವವಿತ್ತು ಸ್ವಾಗತಿಸಿದರು. ಜಯಶ್ರೀ ಕೋಟೆಕಾರ್ ವಂದಿಸಿದರು.





