ಚಿತ್ರಗಳು:ಟಿವಿ1ಮಡಿಕೇರಿ.
ತಲಕಾವೇರಿ: ಬ್ರಹ್ಮಗಿರಿ ತಪ್ಪಲಿನ ಕಾವೇರಿ ಕ್ಷೇತ್ರದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಕಾವೇರಿ ಮಾತೆ ತೀರ್ಥ ಸ್ವರೂಪಿಣಿಯಾದಳು. ತುಲಾಲಗ್ನದಲ್ಲಿ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ತೀರ್ಥೊದ್ಭವ ನಡೆದು ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ಮಾತೆ ದಶ೯ನ ರೂಪ ತೋರಿದಳು. ತೀರ್ಥೊದ್ಭವ ನಡೆದ ಸಂದರ್ಭದಲ್ಲಿ ಅರ್ಚಕರು ಕಾವೇರಿ ತೀಥ೯ ಭಕ್ತರ
ಮೇಲೆ ಸಿಂಪಡಣೆ ಮಾಡಿದರು. ಪ್ರಧಾನ ಅಚ೯ಕ ಪ್ರಶಾಂತ್ ಆಚಾರ್ ನೇತೖತ್ವದಲ್ಲಿ ಅಚ೯ಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನಡೆಯುತ್ತಿದ್ದಂತೆ ಮಂತ್ರಘೋಷದ ನಡುವೆ ಕಾವೇರಿ ಮಾತೆ ತೀಥ೯ರೂಪಿಣಿಯಾಗಿ ದಶ೯ನ ತೋರಿದಳು. ತೀರ್ಥೋದ್ಭವ ಪ್ರಯುಕ್ತ ಕಾವೇರಿ ಕ್ಷೇತ್ರ ಪುಪ್ಪಾಲಂಕಾರದಿಂದ ಕಂಗೊಳಿಸಿತ್ತು. ತೀರ್ಥೋದ್ಭವ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಾವೇರಿ ಕ್ಷೇತ್ರಕ್ಕೆ ಆಗಮಿಸಿದ್ದರು. ದೇವಾಲಯದ ಅನ್ನ ಪ್ರಸಾದ ಸಭಾಭವನದಲ್ಲಿ
ಕೊಡಗು ಏಕೀಕರಣ ರಂಗದಿಂದ ಭಕ್ತರಿಗೆ ಉಪಹಾರ ವಿತರಣೆ ಮಾಡಲಾಗಿತ್ತು.
ಕಾವೇರಿ ತೀರ್ಥೋದ್ಭವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ ಎಸ್ ಪೊನ್ನಣ್ಣ, ಡಾ ಮಂತರ್ ಗೌಡ, ಸುಜಾಕುಶಾಲಪ್ಪ, ಸಕಾ೯ರದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಧಮ೯ಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಟಾಧಿಕಾರಿ ಕೆ ರಾಮರಾಜನ್, ಎಎಸ್ ಪಿ ಸುಂದರ್ ರಾಜ್ , ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವಯ೯ ಸೇರಿದಂತೆ ಅನೇಕರು ಭಾಗಿಯಗಿದ್ದರು.
ಸಾಂಪ್ರದಾಯಿಕ ಧಿರಿಸಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕೊಡವರು ಸೇರಿದ್ದರು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ತೀರ್ಥೋದ್ಭವ ಸಂಭ್ರಮವನ್ನು ಕಣ್ತುಂಬಿಕೊಂಡರು.