ಪುಣೆ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡ ಗೆಲುವು ದಾಖಲಿಸುವ ಮೂಲಕ ಸರಣಿ ವಶಪಡಿಸಿಕೊಂಡಿತು.ಇದರಿಂದಾಗಿ 2012ರ ನಂತರ ತವರಿನಲ್ಲಿ ಒಂದೂ ಟೆಸ್ಟ್ ಸರಣಿ ಸೋಲದ ಭಾರತದ ದಾಖಲೆಗೆ ಬ್ರೇಕ್ ಬಿದ್ದಿತು.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ಮೊದಲ ಮತ್ತು
ಎರಡನೇ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 259 ಮತ್ತು 255 ರನ್ ಗಳಿಸಿ ಭಾರತಕ್ಕೆ 359 ರನ್ಗಳ ಗೆಲುವಿನ ಗುರಿ ನೀಡಿತ್ತು. ಆದರೆ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 156 ರನ್ಗಳಿಗೆ ಕುಸಿದು ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ನಲ್ಲೂ ಮುಗ್ಗರಿಸಿ 245 ರನ್ಗಳಿಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಎರಡು ಇನ್ನಿಂಗ್ಸ್ಗಳಿಂದ 13 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಬಲವಾದ ಪೆಟ್ಟುಕೊಟ್ಟರು. ಭಾರತದ ವಾಷಿಂಗ್ಟನ್ ಸುಂದರ್ ಕೂಡ ಎರಡು ಇನ್ನಿಂಗ್ಸ್ಗಳಿಂದ 11 ವಿಕೆಟ್ ಪಡೆದರೂ ಅವರ ಶ್ರಮ ವ್ಯರ್ಥವಾಯಿತು.
ಭಾರತ ತಂಡ ಸ್ಪಿನ್ ಎದುರು ಆಡಲು ಸಮರ್ಥವಾಗಲಿಲ್ಲ. ಅನುಭವಿ ಆಟಗಾರರಾದ ರೋಹಿತಗ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್, ಶುಭ್ಮನ್ ಗಿಲ್ ಸೇರಿದಂತೆ ಪ್ರಮುಖ ಬ್ಯಾಟರ್ಗಳ ನೀರಸ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.