ಸುಳ್ಯ:ಡಿ.30ರಂದು ಕುಕ್ಕುಜಡ್ಕದಲ್ಲಿ ನಡೆಯುವ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು. ಬಡ್ಡಡ್ಕದಲ್ಲಿರುವ ಅವರ
ಮನೆಗೆ ತೆರಳಿ ಅಭಿನಂದಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಕೆ.ಗೋಕುಲ್ ದಾಸ್, ಶಶಿಧರ್ ಎಂ ಜೆ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಜಯಪ್ರಕಾಶ್ ನೆಕ್ರಪ್ಪಾಡಿ, ಸತ್ಯಕುಮಾರ್ ಆಡಿಂಜ, ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಬಡ್ಡಡ್ಕ, ಪುರುಷೋತ್ತಮ ದೋಣಿಮೂಲೆ ಶುಭಹಾರೈಸಿದರು.
ತೇಜಕುಮಾರ್ ಬಡ್ಡಡ್ಕ ಅವರ ಪತ್ನಿ ಶ್ರೀಮತಿ ಜಯಲಲಿತ, ಪುತ್ರಿ ಹಾಗೂ ಮನೆಯವರು ಉಪಸ್ಥಿತರಿದ್ದರು.





