ತಿರುವನಂತಪುರಂ: ವಿಶ್ವಕಪ್ ಪಂದ್ಯಗಳ ಸಿದ್ಧತೆಯ ಕೊನೆಯ ಹಂತದ ಭಾಗವಾಗಿ ಅಭ್ಯಾಸ ಪಂದ್ಯ ಆಡಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ಇತರ ಆಟಗಾರರು ತಿರುವನಂತಪುರಕ್ಕೆ ಆಗಮಿಸಿದ್ದಾರೆ.ಭಾರತ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು
ನೆದರ್ಲೆಂಡ್ಸ್ ವಿರುದ್ಧ ಅ.3ರಂದು ತಿರುವನಂತಪುರಂ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಡಲಿದೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಇತರ ಆಟಗಾರರು ಆಗಮಿಸಿದ್ದಾರೆ. ಕೊಹ್ಲಿ ಪಂದ್ಯ ಆರಂಭಕ್ಕೆ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಗುವಾಹಟಿಯಲ್ಲಿ ನಡೆಯಬೇಕಾಗಿದ್ದ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು. ಅ.5ರಿಂದ ವಿಶ್ವಕಪ್ ಪಂದ್ಯ ಆರಂಭವಾಗಲಿದ್ದು ಅದಕ್ಕಿಂತ ಮುಂಚಿತವಾಗಿ ಪ್ರತಿ ತಂಡಗಳು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.