ಗಯಾನ: ಭಾರತ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ಗೆ ಪ್ರವೇಶ ಪಡೆದಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ ಟೂರ್ನಿಯಲ್ಲಿ ಅಜೇಯರಾಗಿ ಫೈನಲ್ ಪ್ರವೇಶಿಸಿತು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲಿಯೂ ಮಿಂಚಿನ ಪ್ರದರ್ಶನ ನೀಡಿದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವಿನ
ನಗೆ ಬೀರಿತು.ಈ ಮೂಲಕ 2022ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್16.4 ಓವರ್ಗಳಲ್ಲಿ ರನ್ 103 ಗಳಿಸಿ ಆಲ್ ಔಟ್ ಆಗಿ ಸೋಲೊಪ್ಪಿಕೊಂಡಿತು.
ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಆಟಗಾರರು ರನ್ ಗಳಿಸಲು ಪರದಾಡಿದರು. ಅಕ್ಷರ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ಗೆ ಆರಂಭದಲ್ಲಿಯೇ ಆಘಾತ ನೀಡಿದರು. 50 ರನ್ ಆಗುವಷ್ಟರಲ್ಲಿಯೇ 5 ವಿಕೆಟ್ ಕಳೆದಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ದಾಳಿ ಮುಂದೆ ಇಂಗ್ಲೆಂಡ್ ಅಕ್ಷರಷಃ ಕುಸಿಯಿತು.ಇಂಗ್ಲೆಂಡ್ ಪರ ನಾಯಕ
ಜೋಸ್ ಬಟ್ಲರ್ 15 ಎಸೆತಗಳಲ್ಲಿ ನಾಲ್ಕು ಬೌಂಡರಿಗಳಿದ್ದ 23 ರನ್
ರನ್ ಗಳಿಸಿದರೆ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 3 ಬೌಂಡರಿಗಳಿದ್ದ 25 ರನ್ ರನ್ ಗಳಿಸಿದರು. ಜೋಪ್ರಾ ಆರ್ಚರ್ 14 ಎಸೆತಗಳಲ್ಲಿ 1 ಬೌಂಡರಿ ಹಾಗೂ ಸಿಕ್ಸರ್ ಸಹೀತ 21 ರನ್ ಗಳಿಸಿದರು.
ಭಾರತದ ಪರ ಅಕ್ಷರ್ ಪಟೇಲ್ ಹಾಗೂ ಕುಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದರೆ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. 2 ಇಂಗ್ಲೀಷ್ ಬ್ಯಾಟರ್ಗಳು ರನ್ ಔಟ್ ಆದರು.
ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ನಾಯಕ ರೋಹಿತ್ ಶರ್ಮ ಅವರ ಆಕರ್ಷಕ ಅರ್ಧ ಶತಕ, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಮೊತ್ತ ಪೇರಿಸಿತು.8 ಓವರ್ಗಳ ನಂತರ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಬಳಿಕ ಕೆಲ ಹೊತ್ತಿನ ನಂತರ ಮಳೆರಾಯ ಬಿಡುವು ಕೊಟ್ಟಿತು. ನಂತರ ಸ್ಪೋಟಕ ಆಟವಾಡಿದ
ನಾಯಕ ರೋಹಿತ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹೀತ 57 ರನ್ ಗಳಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್
36 ಎಸೆತಗಳಲ್ಲಿ ನಾಲ್ಕು ಬೌಂಡರಿ 2 ಸಿಕ್ಸರ್ ಸಹೀತ 47 ರನ್, ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 1 ಬೌಂಡರಿ,2 ಸಿಕ್ಸರ್ ಸಹೀತ 23 ರನ್, ರವೀಂದ್ರ ಜಡೇಜ 9 ಎಸೆತಗಳಲ್ಲಿ 2 ಬೌಂಡರಿ ಸಹೀತ ಅಜೇಯ 17 ರನ್ ಗಳಿಶಿದರು. ವಿರಾಟ್ ಕೊಹ್ಲಿ (9) ರಿಷಭ್ ಪಂತ್ (4), ಶಿವಂ ದುಬೆ(0), ಅಕ್ಸರ್ ಟೇಲ್(10) ರನ್ ಗಳಿಸಿದರು.ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು