ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ಪೋಷಕರು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಹಿರಿಯ ಶಿಕ್ಷಕರಾದ ಬಿ.ಪುಂಗವ ಗೌಡ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಮಣ್ಯ ಹಾಗೂ ಬಿ.ಗಂಗಮ್ಮ ಇವರು ಭಾಗವಹಿಸಿ ಶಿಕ್ಷಕ್ಷರ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಇವರಿಗೆ ಸಂಸ್ಥೆಯ
ಪರವಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಪೋಷಕರು ಒಡಗೂಡಿ ಶಾಲೆಯ ಸಂಚಾಲಕಿ ಗೀತಾಂಜಲಿ. ಟಿ.ಜಿ ಹಾಗೂ ಶಾಲಾ ಶಿಕ್ಷಕಿ ನಿರ್ಮಲ ಹಾಗೂ ಸಂಸ್ಥೆಯ ಸಹಾಯಕಿ ಕುಮಾರಿ ಶ್ವೇತ ಅವರನ್ನು ಮಕ್ಕಳ ಪರವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶುಭಕರ ಬಿ. ಸಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪೋಷಕರಾದ ಪ್ರಮೀಳ
ಪ್ರಾರ್ಥಿಸಿದರು. ಶುಶಾನ್ ಸ್ವಾಗತಿಸಿ,ರಕ್ಷಿತಾ ವಂದಿಸಿದರು. ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.