ಸುಳ್ಯ:ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಕೇರಳದ ಭಾಗದಲ್ಲಿ ಕಲ್ಲಪಳ್ಳಿ- ಪಾಣತ್ತೂರು ಮಧ್ಯೆ ಪರಿಯಾರಂನಲ್ಲಿ ಟ್ಯಾಂಕರ್ ಲಾರಿಯೊಂದು ಅಪಘಾತಕ್ಕೀಡಾಗಿರುವ ಘಟನೆ ವರದಿಯಾಗಿದೆ. ಪರಿಯಾರಂ ಘಾಟಿ ರಸ್ತೆಯಲ್ಲಿ ರಾತ್ರಿ ವೇಳೆ ಅಪಘಾತ ಸಂಭವಿಸಿದ್ದು ಟ್ಯಾಂಕರ್ನಲ್ಲಿದ್ದ 3 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರು ಕಾರ್ಯಾಚರಣೆ ನಡೆಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಲಾಗಿದೆ. ಡೀಸಿಲ್
ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ. ಟ್ಯಾಂಕರ್ ಮಗುಚಿ ಮನೆಯ ಮೇಲೆ ಬಿದ್ದಿದ್ದು ಮನೆಗೆ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಠೇ ಲಭ್ಯವಾಗಬೇಕಾಗಿದೆ. ಅಂತಾರಾಜ್ಯ ರಸ್ತೆಯಲ್ಲಿ ಪರಿಯಾರಂ ಘಾಟಿ ರಸ್ತೆಯಲ್ಲಿ ದೊಡ್ಡ ಅಪಘಾತಗಳು ಈ ಹಿಂದೆಯೂ ಸಂಭವಿಸಿತ್ತು. ಎರಡು ವರ್ಷದ ಈ ಹಿಂದೆ ಬಸ್ ಅಪಘಾತ ಸಂಭವಿಸಿ 6 ಮಂದಿ ಮೃತಪಟ್ಟಿದ್ದರು.
ಇಲ್ಲೇ ಸಮೀಪದಲ್ಲಿ ಮರ ಸಾಗಾಟ ನಡೆಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ 4 ಮಂದಿ ಮೃತಪಟ್ಟಿದ್ದರು. ಬಸ್ ಅಪಘಾತ ಸಂಭವಿಸಿರುವ ಸಮೀಪದಲ್ಲಿಯೇ ಟ್ಯಾಂಕರ್ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ.