ಕಾಂಚೀಪುರಂ: ಮನೆಯೊಡತಿಗೆ ಮಾಸಿಕ ರೂ.1,000 ಆರ್ಥಿಕ ನೆರವು ನೀಡುವ ತಮಿಳುನಾಡಿನ ಡಿಎಂಕೆ ಸರ್ಕಾರದ ಪ್ರಮುಖ ಸಮಾಜ ಕಲ್ಯಾಣ ಯೋಜನೆಗೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಇಂದು ಚಾಲನೆ ನೀಡಿದರು. ಹಲವು ಫಲಾನುಭವಿಗಳಿಗೆ ಬ್ಯಾಂಕ್ ಡೆಬಿಟ್
ಕಾರ್ಡ್ಗಳನ್ನು ವಿತರಿಸುವ ಮೂಲಕ ಯೋಜನೆ ಆರಂಭಿಸಿದರು. ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಯೋಜನೆಗೆ ಚಾಲನೆ ನೀಡಿದರುಯೋಜನೆಯನ್ನು ಮಹಿಳೆಯರ ಹಕ್ಕು ಎಂದು ಸರ್ಕಾರ ಕರೆದಿದೆ. ಯೋಜನೆ ಅಡಿಯಲ್ಲಿ 1.06 ಕೋಟಿ ಮಹಿಳೆಯರನ್ನು ಫಲಾನುಭವಿಗಳೆಂದು ಸರ್ಕಾರ ಗುರುತಿಸಿದೆ.
ಮಹಿಳೆಯರ ಜೀವನದ ಗುಣಮಟ್ಟ ಹೆಚ್ಚಿಸಲು ಆರಂಭಿಸಿರುವ ಈ ಯೋಜನೆಯ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದನ್ನು ನಗದೀಕರಿಸಿಕೊಳ್ಳಲು ಅವರೆಲ್ಲರಿಗೂ ಎಟಿಎಂ ಕಾರ್ಡ್ಗಳನ್ನು ವಿತರಿಸಲಾಗುತ್ತಿದೆ,