ಸುಳ್ಯ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಸುಳ್ಯ ಕ್ಷೇತ್ರ ಸಮಿತಿ ಮತ್ತು ಆರು ವಲಯಗಳ ಸಮಿತಿ ವತಿಯಿಂದ ಟೈಲರ್ಸ್ ಡೇ ಆಚರಣೆ,ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಸಹಯೊಗದೊಂದಿಗೆ ಉಚಿತ ನೇತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ ಮಾ.7 ರಂದು ಸುಳ್ಯದ
ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ರವೀಂದ್ರ.ಡಿ ಮಾತನಾಡಿ ವಿವರ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ ಟಿ ಎ ಅಧ್ಯಕ್ಷ ರವೀಂದ್ರ ಡಿ ಹಾಗೂ ಮುಖ್ಯ ಅಥಿತಿಗಳಾಗಿ ಕರ್ಮಿಕ ಅಧಿಕಾರಿ ಉಪವಿಭಾಗ 2ಮಂಗಳೂರು ವಿಲ್ಮ ಎಲಿಜಬೆತ್ ತಾವ್ರೋ , ಹಿರಿಯ ಕಾರ್ಮಿಕ ನಿರೀಕ್ಷಕ ಪುತ್ತೂರು ಗಣಪತಿ ಹೆಗ್ಡೆ ,ಕೆಎಸ್ ಟಿ ಎ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಕೆ.ಎಂ, ಕೆಎಸ್ ಟಿಎ ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ,ಜಿಲ್ಲಾ ಉಪಾಧ್ಯಕ್ಷ ಕೆ.ಲಿಗೋಧರ ಆಚಾರ್ಯ ,ಸುಳ್ಯ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ , ಖಜಾಂಜಿ, ರಮೇಶ್ ತೊಡಿಕಾನ ಭಾಗವಹಿಸಲಿದ್ದಾರೆ.
ಅಲ್ಲದೇ ಈ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರವೀಂದ್ರ ಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಜ್ವಲ್ ಕುಮಾರ್ ,ಈಶ್ವರ ಕುಲಾಲ್ , ಕೆ.ಲಿಗೋಧರ ಆಚಾರ್ಯ, ಸುಮಿತ್ರ ಜಿ.ಎಂ ವಿಜಯಕುಮಾರ್ವರೈ ರಮೇಶ್ ತೊಡಿಕಾನ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಲಿಗೋಧರ ಆಚಾರ್ಯ , ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ , ಖಜಾಂಚಿ ರಮೇಶ್ ತೊಡಿಕಾನ,ದಿವಾಕರ ಪೇರಾಲು,ಕುಸುಮಾಧರ ರೈ ಬೂಡು ಉಪಸ್ಥಿತರಿದ್ದರು.







