ಕೋಲ್ಕತ್ತ:ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಇಂದಿನಿಂದ ನಡೆಯಲಿದೆ. ಇಂದು ಮೊದಲ ಸೆಮಿಫೈನಲ್ನಲ್ಲಿ
ಹಾಲಿ ರನ್ನರ್ಸ್ ಅಪ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಈಡನ್ ಗಾರ್ಡನ್ನಲ್ಲಿ ಮುಖಾಮುಖಿಯಾಗಲಿದೆ. ನಾಳೆ(ಮಾ.5) ಎರಡನೇ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಭಾರತ ಮುಂಬೈನಲ್ಲಿ
ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮಾ.8ರಂದು ಫೈನಲ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ, ಸ್ಫೋಟಕ ಶೈಲಿಯ ಬ್ಯಾಟರ್ ಏಡನ್ ಮರ್ಕರಂ ಮತ್ತು ಕಿವೀಸ್ ತಂಡದ ನಾಯಕ, ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರ ನಡುವಿನ ಹಣಾಹಣಿಯೆಂದೇ ಇಂದಿನ ಪಂದ್ಯದ ಹೈಲೈಟ್ಸ್.ದಕ್ಷಿಣ ಆಫ್ರಿಕಾ ತಂಡದಲ್ಲಿ ಮರ್ಕರಂ ಅಷ್ಟೇ ಅಲ್ಲ; ಕ್ವಿಂಟನ್ ಡಿ ಕಾಕ್, ಡೆವಾಲ್ಡ್ ಬ್ರೆವಿಸ್, ರಿಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್ ಮತ್ತು ಮಾರ್ಕೊ ಯಾನ್ಸೆನ್ ಅವರು ಬೀಸಾಟಕ್ಕೆ ಹೆಸರಾದವರು. ಬೌಲರ್ಗಳ ನಿದ್ದೆಗೆಡಿಸಬಲ್ಲ ಬಲಾಢ್ಯರು.
ಕಿವೀಸ್ ಬಳಗದಲ್ಲಿ ಸ್ಯಾಂಟನರ್ ಅವರಿಗೆ ರಚಿನ್ ರವೀಂದ್ರ (9 ವಿಕೆಟ್), ಆಲ್ರೌಂಡರ್ ಗ್ಲೆನ್ ಫಿಲಿಪ್ಸ್, ಕೋಲಿ ಮೆಕೆಕಾಂಚಿ ಅವರ ಬಲವಿದೆ. ಇವರು ಮರ್ಕರಂ ಅವರಿಗೆ ಸ್ಪಿನ್ ಪರೀಕ್ಷೆಗೆ ಒಡ್ಡಬಲ್ಲರು. ಕಿವೀಸ್ ತಂಡಕ್ಕೆ ಫಿನ್ ಅಲೆನ್, ಟಿಮ್ ಸೀಫರ್ಟ್, ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರಿಲ್ ಮಿಚೆಲ್ ಬ್ಯಾಟಿಂಗ್ ಬಲ ತುಂಬಲಿದೆ.
ತಂಡಗಳು
ನ್ಯೂಜಿಲೆಂಡ್: ಮಿಚೆಲ್ ಸ್ಯಾಂಟನರ್ (ನಾಯಕ) ಫಿನ್ ಅಲೆನ್ ಟಿಮ್ ಸೀಫರ್ಟ್ ರಚಿನ್ ರವೀಂದ್ರ ಡೆವೊನ್ ಕಾನ್ವೆ ಕೈಲ್ ಜೆಮಿಸನ್ ಜೇಕಬ್ ಡಫಿ ಗ್ಲೆನ್ ಫಿಲಿಪ್ಸ್ ಡ್ಯಾರಿಲ್ ಮಿಚೆಲ್ ಲಾಕಿ ಫರ್ಗ್ಯುಸನ್ ಮಾರ್ಕ್ ಚಾಪ್ಮನ್ ಮ್ಯಾಟ್ ಹೆನ್ರಿ ಈಶ್ ಸೋಧಿ ಕೊಲೆ ಮೆಕಾಂಚಿ ಜೇಮ್ಸ್ ನಿಶಾಮ್.
ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಕ್ವಿಂಟನ್ ಡಿ ಕಾಕ್ ರಿಯಾನ್ ರಿಕೆಲ್ಟನ್ ಡೆವಾಲ್ಡ್ ಬ್ರೆವಿಸ್ ಡೇವಿಡ್ ಮಿಲ್ಲರ್ ಟ್ರಿಸ್ಟನ್ ಸ್ಟಬ್ಸ್ ಮಾರ್ಕೊ ಯಾನ್ಸೆನ್ ಕಾರ್ಬಿನ್ ಬಾಷ್ ಕಗಿಸೊ ರಬಾಡ ಕೇಶವ್ ಮಹಾರಾಜ್ ಲುಂಗಿ ಎನ್ಗಿಡಿ ಜಾರ್ಜ್ ಲಿಂಡೆ ಕೆವೆನಾ ಮಫಾಕಾ ಎನ್ರಿಚ್ ನಾಕಿಯಾ ಜೇಸನ್ ಸ್ಮಿತ್.
ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ; ಸ್ಟಾರ್ ಸ್ಪೋರ್ಟ್ಸ್ ಜಿಯೊ ಹಾಟ್ಸ್ಟಾರ್ ಆ್ಯಪ್.









