ಕೇಪ್ಟೌನ್: ಮಹಿಳಾ ಟ್ವೆಂಟಿ-20 ವಿಶ್ವಕಪ್ನ ಗ್ರೂಪ್ ‘ಬಿ’ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 11 ರನ್ ಅಂತರದಿಂದ ಸೋಲನುಭವಿಸಿದೆ.ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 152 ರನ್ ಗುರಿ ಪಡೆದಿದ್ದ ಭಾರತ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್

ಗಳಿಸಿತು.ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಅರ್ಧಶತಕ(52 ರನ್,41 ಎಸೆತ,7 ಬೌಂ.,1 ಸಿ.) ಹಾಗೂ ರೇಣುಕಾ ಸಿಂಗ್ ಐದು ವಿಕೆಟ್ ಗೊಂಚಲು ಪಡೆದ ಹೊರತಾಗಿಯೂ ರಿಚಾ ಘೋಷ್(ಔಟಾಗದೆ 47 ರನ್)ಕೊನೆಯ ತನಕ ಹೋರಾಡಿದರು. ಭಾರತ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಇಂಗ್ಲೆಂಡ್ ಪರ ಸರ್ಹಾ ಗ್ಲೆನ್(2-27)ಯಶಸ್ವಿ ಪ್ರದರ್ಶನ ನೀಡಿದರು.ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 7 ವಿಕೆಟ್ಗಳ ನಷ್ಟಕ್ಕೆ 151 ರನ್ ಗಳಿಸಿತು. ಸಿವೆರ್ ಬ್ರಂಟ್(50 ರನ್)ಹಾಗೂ ಆ್ಯಮಿ ಜೋನ್ಸ್(40 ರನ್)ಮಹತ್ವದ ಕಾಣಿಕೆ ನೀಡಿದರು. ಭಾರತದ ಪರ ವೇಗಿ ರೇಣುಕಾ ಸಿಂಗ್ (5-15)ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು.