ಕೇಪ್ಟೌನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿ ಫೈನಲ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ತಂಡವನ್ನು 6 ರನ್ನಿಂದ ರೋಚಕವಾಗಿ ಮಣಿಸಿದೆ. ಈ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿದೆ. ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 165 ರನ್ ಗುರಿ ಬೆನ್ನಟ್ಟಿದ
ಇಂಗ್ಲೆಂಡ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಅಯಾಬೋಂಗಾ ಖಾಕ 4 ಹಾಗೂ ಶಬ್ನಮ್ ಇಸ್ಮಾಯೀಲ್ 3 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ಪರ ಸ್ಕಿವರ್ ಬ್ರಂಟ್(40 ರನ್),ಡೇನಿಯಲ್ ವೇಟ್(34 ರನ್) ಹಾಗೂ ಹೀದರ್ ನೈಟ್(31 ರನ್) ಹೋರಾಟ ನೀಡಿದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 164 ರನ್ ಗಳಿಸಿತು.ಆರಂಭಿಕ ಆಟಗಾರ್ತಿಯರಾದ ತಝ್ಮಿನ್ ಬ್ರಿಟ್ಸ್(68 ರನ್, 55 ಎಸೆತ) ಹಾಗೂ ವೋಲ್ವಾರ್ಟ್(53 ರನ್, 44 ಎಸೆತ)ಮೊದಲ ವಿಕೆಟಿಗೆ 96 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಆದರೆ ಈ ಇಬ್ಬರು ಔಟಾದ ನಂತರ ಮರಿಝಾನ್ ಕಾಪ್(ಔಟಾಗದೆ 27)ಹೊರತುಪಡಿಸಿ ಉಳಿದವರು ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಕ್ಲೋಯ್ ಟ್ರಯಾನ್(3), ನಾಡಿನ್ ಡಿ ಕ್ಲಾರ್ಕ್(0)ಬೇಗನೆ ಔಟಾದರು.ಇಂಗ್ಲೆಂಡ್ ಪರ ಎಕ್ಲೆಸ್ಟೋನ್(3-22)ಯಶಸ್ವಿ ಪ್ರದರ್ಶನ ನೀಡಿದರು.