ಟ್ರಿನಿಡಾಡ್: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 9 ವಿಕೆಟ್ ಅಂತರದಲ್ಲಿ ಅಫ್ಘಾನಿಸ್ತಾನ ಮಣಿಸಿದ ದಕ್ಷಿಣ ಆಫ್ರಿಕಾ ಫೈನಲ್ಗೆ ಪ್ರವೇಶ ಪಡೆಯಿತು. ಟಿ20 ವಿಶ್ವಕಪ್ನಲ್ಲಿ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ.ಗುರುವಾರ ಬೆಳಗ್ಗೆ ಬ್ರಯಾನ್ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ
ಮೊದಲು ಬ್ಯಾಟ್ ಮಾಡಿದ ಅಫ್ಗಾನಿಸ್ತಾನ 11.5 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 56 ರನ್ ಪೇರಿಸಿತು. ಗುರಿ ಬೆನ್ನತ್ತಿದ ಆಫ್ರಿಕಾ 8.5 ಓವರ್ಗಳಲ್ಲೇ 60 ರನ್ ಬಾರಿಸುವ ಮೂಲಕ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಆಡಂ ಮಕರಾಂ 23, ರೀಜಾ ಹೆನ್ರೀಚ್ 29 ರನ್ ಹೊಡೆದು ಆಜೇಯರಾಗಿ ಉಳಿದರು.ಡಿ.ಕಾಕ್ 5 ರನ್ ಗಳಿಸಿ ಔಟಾದರು.
ಅಫ್ಗನ್ ಪರ ಫರೂಕಿ 1 ವಿಕೆಟ್ ಪಡೆದರು. ಅಫ್ಘಾನಿಸ್ತಾನದ
ಒಮಾರ್ಜಿ ಮಾತ್ರ 10 ರನ್ ಹೊಡೆದರು. ಉಳಿದ ಯಾವುದೇ ಬ್ಯಾಟರ್ಗಳು ಎರಡಂಕಿ ದಾಟಲಿಲ್ಲ.ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ, ನೋಕಿಯಾ ತಲಾ 2 ವಿಕೆಟ್ ಪಡೆದರು. ಶಂಷಿ, ಯಾಕ್ಸಿನ್ ತಲಾ ಮೂರು ವಿಕೆಟ್ ಪಡೆದರು.