ಕೊಲಂಬೊ: ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ನೆದರ್ಲೆಂಡ್ಸ್ ತಂಡದ ವಿರುದ್ಧ ಮೂರು ವಿಕೆಟ್ಗಳ ಜಯಗಳಿಸಿದೆ.ವೆಸ್ಟ್ ಇಂಡೀಸ್ ತಂಡ ‘ಸಿ’ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 35 ರನ್ಗಳ ಗೆಲುವು ಸಾಧಿಸಿತು. ನೆದರ್ಲೆಂಡ್ಸ್ ತಂಡ ನೀಡಿದ 148 ರನ್ಗಳ ಗುರಿಯನ್ನು ಎದುರಿಸಿದ ಪಾಕ್ 11 ಓವರುಗಳಲ್ಲಿ
2 ವಿಕೆಟ್ಗೆ 98 ರನ್ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆದರೆ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ಗೆಲುವಿಗೆ ಕೊನೆಯ ಎರಡು ಓವರುಗಳಲ್ಲಿ 29 ರನ್ಗಳು ಬೇಕಿದ್ದವು.ವ್ಯಾನ್ ಬೀಕ್ ಎಸೆದ 19ನೇ ಓವರಿನಲ್ಲಿ ಫಾಹೀಮ್ ಅಶ್ರಫ್ ಮೂರು ಸಿಕ್ಸರ್ಗಳು ಸೇರಿದಂತೆ 24 ರನ್ ಬಾರಿಸಿ ಒತ್ತಡ ನಿವಾರಿಸಿದರು. ಸ್ಕೋರ್ ನೆದರ್ಲೆಂಡ್ಸ್: 19.5 ಓವರುಗಳಲ್ಲಿ 147 (ಮೈಕೆಲ್ ಲೆವಿಟ್ 24, ಬಾಸ್ ಡೆ ಲೇಡೆ 30, ಸ್ಕಾಟ್ ಎಡ್ವರ್ಡ್ಸ್ 37; ಸಲ್ಮಾನ್ ಮಿರ್ಝಾ 24ಕ್ಕೆ3, ಮೊಹಮ್ಮದ್ ನವಾಝ್ 38ಕ್ಕೆ2, ಅಬ್ರಾರ್ ಅಹ್ಮದ್ 23ಕ್ಕೆ2, ಸಯೀಮ್ ಅಯೂಬ್ 7ಕ್ಕೆ2); ಪಾಕಿಸ್ತಾನ: 19.3 ಓವರುಗಳಲ್ಲಿ 7 ವಿಕೆಟ್ಗೆ 148 (ಸಾಹಿಬ್ಝಾದಾ ಫರ್ಹಾನ್ 47, ಸಯೀಮ್ ಅಯೂಬ್ 24, ಫಾಹೀಮ್ ಅಶ್ರಫ್ ಔಟಾಗದೇ 29; ಆರ್ಯನ್ ದತ್ 33ಕ್ಕೆ2, ಪಾಲ್ ವಾನ್ ಮೀಕೆರನ್ 20ಕ್ಕೆ2).
ಶಿಮ್ರೋನ್ ಹೆಟ್ಮೇಯರ್ ಅವರ ಆಕ್ರಮಣಕಾರಿ ಅರ್ಧಶತಕ ಮತ್ತು ವೇಗದ ಬೌಲರ್ ರೊಮಾರಿಯೊ ಶೆಫರ್ಡ್ (20ಕ್ಕೆ5) ಅವರ ಹ್ಯಾಟ್ರಿಕ್ ಸಹಿತ ಅಮೋಘ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ಜಯ ದಾಖಲಿಸಿತು. ಹೆಟ್ಮೇಯರ್ (64, 36ಎ, 4×2, 6×6) ಅವರ ಬ್ಯಾಟಿಂಗ್ ಬಲದಿಂದ 5 ವಿಕೆಟ್ಗೆ 182 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಉತ್ತರವಾಗಿ, ಸ್ಕಾಟ್ಲೆಂಡ್ ತಂಡ 18.5 ಓವರುಗಳಲ್ಲಿ 147 ರನ್ಗಳಿಗೆ ಹೋರಾಟ ಮುಗಿಸಿತು. ಗಯಾನಾದ ವೇಗದ ಬೌಲರ್ ಶೆಫರ್ಡ್ ಅವರು ಸ್ಕಾಟ್ಲೆಂಡ್ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಐದು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು ವೆಸ್ಟ್ ಇಂಡೀಸ್ ಗೆಲುವನ್ನು ಖಚಿತಪಡಿಸಿದರು.







