ಸುಳ್ಯ: ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಕ್ಷೇತ್ರ ನಿರ್ಮಾಣ ಆಗಿರುವುದು ಸ್ವಾಗತಾರ್ಹ. ಇದು ಸಮಸ್ತ ಭಾರತೀಯರ ಶಾಂತಿಯ ಕೇಂದ್ರವಾಗಲಿ ಎಂದು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಒಳ್ಳೆಯ ಕಾರ್ಯದಲ್ಲಿ ಎಲ್ಲರೂ
ಕೈಜೋಡಿಸಬೇಕು. ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಕೆಲಸ ಆಗಬಾರದು. ಮಾನವೀಯತೆಯ ಮೂಲಕ ಧರ್ಮವನ್ನು ಬೆಳೆಸಬೇಕು. ಅಯೋಧ್ಯೆಯಲ್ಲಿ ಸದ್ಯದಲ್ಲಿಯೇ ಮಸೀದಿಯೂ ನಿರ್ಮಾಣ ಆಗಲಿದ್ದು ಶಾಂತಿ, ಸೌಹಾರ್ಧತೆಯ ಕೇಂದ್ರವಾಗಿ ಬೆಳಗಬೇಕು ಎಂದು ಅಶಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಜೊತೆಗೆ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನಗಳನ್ನು ಬಿಡುಗಡೆಗೊಳಿಸುತ್ತಿದೆ. ಇದರಿಂದ ಉತ್ತಮವಾಗಿ ಅಭಿವೃದ್ದಿ ಆಗುತ್ತಿದೆ. ಅಲ್ಲದೇ ಸುಳ್ಯದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ ಪ್ರಾರಂಭಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅದರ ಜೊತೆಗೆ ಹೆಣ್ಣು ಮಕ್ಕಳಿಗೆ ವಸತಿ ನಿಲಯ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ನ.ಪಂ.ಸದಸ್ಯ ಶರೀಫ್ ಕಂಠಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ರೈ ಮೇನಾಲ, ಕಾರ್ಯದಶಿಗಳಾದ ಪ್ರಕಾಶ್ ಮೇನಾಲ, ಮುಸ್ತಫ ಉಪಸ್ಥಿತರಿದ್ದರು.









