ಸುಳ್ಯ: ಉದ್ಯೋಗದ ನಿಮಿತ್ತ ಬೇರೆ ಕಡೆ ತೆರಳಿರುವವರನ್ನು ಮತದಾರರ ಪಟ್ಟಿಯಿಂದ ತೆಗೆದು ಅನ್ಯಾಯ ಮಾಡಲಾಗುತಿದೆ. ಈ ರೀತಿಯಲ್ಲಿ ಅಲ್ಪಸಂಖ್ಯಾತರ ಹೆಸರನ್ನು ವ್ಯಾಪಕವಗಿ ತೆಗೆಯಲಾಗುತ್ತಿದೆ ಎಂದು ರಾಜ್ಯ ಮುಸ್ಲೀಂ ಯುತ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮತದಾರರ ಪಟ್ಟಿಯಿಂದ ಅರ್ಹರನ್ನು ತೆಗೆಯುತ್ತಿರುವುದು ನಮ್ಮ
ಗಮನಕ್ಕೆ ಬಂದಿದೆ. ಊರಿನಲ್ಲಿದ್ದು ಇನ್ನೊಂದು ಊರಿಗೆ ಕೆಲಸಕ್ಕೆ ಎಂದು ಹೋಗಿ 6 ತಿಂಗಳು ಅಲ್ಲಿದ್ದರೆ ಸಾಕು. ಈ ಮಾಹಿತಿಯನ್ನು ಅಧಿಕಾರಿಗಳು ಪಡೆದು ಅಂತವರ ಹೆಸರನ್ನು ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಈಗಾಗಲೇ ನಾವು ಎಲ್ಲ ಮಸೀದಿಗಳಿಗೆ ಹಾಗು ವಿವಿಧ ಸಂಘಟನೆಗಳಿಗೆ ಮಾಹಿತಿ ನೀಡಿ ತಮ್ಮ ವ್ಯಾಪ್ತಿಯಲ್ಲಿ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಹಾಗೂ ಪಟ್ಟಿಯನ್ನು ಪರಿಶೀಲಿಸಲು ಕೇಳಿಕೊಳ್ಳುತ್ತೇವೆ. ಮತದಾನ ಎನ್ನುವುದು ಪ್ರತಿಯೊಬ್ಬನ ಹಕ್ಕು. ಆತ ಕೆಲಸ ಸಮಯ ಊರಲ್ಲಿ ಇರಲಿಲ್ಲವೆಂಬ ಕಾರಣಕ್ಕೆ ಪಟ್ಟಿಯಿಂದಲೇ ತೆಗೆದುಹಾಕುವ ಕೆಲಸ ಸರಿಯಲ್ಲ. ಈ ಕುರಿತು ವಿವಿಧ ಸಂಘಟನೆಗಳು, ಕಾಂಗ್ರೆಸ್ ಇತ್ಯಾದಿ ಪಕ್ಷಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತದಾರರಿಗೆ ಅನ್ಯಾಯ ಆಗದಂತೆ ನೋಡಿ ಕೊಳ್ಳಬೇಕು ಎಂದರು. ದೇಶ ಪ್ರೇಮಿ, ಕನ್ನಡಾಭಿಮಾನಿ ಟಿಪ್ಪು ಸುಲ್ತಾನ್ ಅವರನ್ನು ಅವಹೇಳನ ಮಾಡುವ ಕೆಲಸ ಕೆಲವರಿಂದ ಆಗುತ್ತಿದೆ. ಇದನ್ನು ನಾವು ಖಂಡಿಸುವುದಾಗಿ ಟಿ.ಎಂ. ಶಹೀದ್ ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಸಿದ್ದಿಕ್ ಕೊಕ್ಕೊ, ಹನೀಫ್ ಬೀಜಕೊಚ್ಚಿ ಉಪಸ್ಥಿತದ್ದರು.