ಮುಂಬೈ:ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ನೇ ಸಾಲಿನ ಟಿ20 ವಿಶ್ವಕಪ್ ಇಂದಿನಿಂದ ಆರಂಭಗೊಳ್ಳಲಿದರ. 20 ತಂಡಗಳು ಭಾಗವಹಿಸಲಿವೆ. ಇದುವರೆಗೂ ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ 10 ತಂಡಗಳು ಮಾತ್ರ ಭಾಗವಹಿಸುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸುತ್ತಿವೆ.ಭಾರತ ಮತ್ತು
ಶ್ರೀಲಂಕಾ ತಂಡಗಳು ಆಯೋಜಕರಾಗಿರುವುದರಿಂದ ನೇರ ಅರ್ಹತೆ ಪಡೆದಕೊಂಡಿವೆ. 2024ರ ವಿಶ್ವಕಪ್ನಲ್ಲಿ ಅಗ್ರ 7 ಸ್ಥಾನಗಳನ್ನು ಪಡೆದ ಎಲ್ಲಾ 7 ತಂಡಗ ನೇರ ಅರ್ಹತೆ ಪಡೆದಿವೆ. ಜೊತೆಗೆ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಟಿ-20ಐ ರ್ಯಾಂಕಿಂಗ್ನಲ್ಲಿ ಉತ್ತಮ ಸ್ಥಾನ ಪಡೆದಿರುವ ಐರ್ಲೆಂಡ್, ಪಾಕಿಸ್ಥಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಹ ನೇರ ಅರ್ಹತೆ ಪಡೆದುಕೊಂಡಿವೆ.ಉಳಿದ 8 ಸ್ಥಾನಗಳಿಗಾಗಿ ನಡೆದ ಅರ್ಹತಾ ಸುತ್ತುಗಳಲ್ಲಿ ಅಮೆರಿಕಾದಿಂದ ಒಂದು ತಂಡ, ಆಫ್ರಿಕಾ ಮತ್ತು ಯೂರೋಪ್ನಿಂದ ತಲಾ ಎರಡು ತಂಡಗಳು.
ಏಷ್ಯಾ ಮತ್ತು ಪ್ಯಾಸಿಫಿಕ್ನಿಂದ ಮೂರು ತಂಡಗಳು ಅರ್ಹತಾ ಸುತ್ತುಗಳ ಮೂಲಕ ಅಯ್ಕೆಯಾಗಿವೆ. ಸದ್ಯ, ಟಿ20 ವಿಶ್ವಕಪ್ ಆಡಲಿರುವ 20 ತಂಡಗಳು ಆಡಲಿದೆ. ಭಾರತದಲ್ಲಿ ತಮ್ಮ ಪಂದ್ಯಗಳನ್ನು ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡದ ಬದಲು ಸ್ಕಾಟ್ಲ್ಯಾಂಡ್ ತಂಡಕ್ಕೆ ಟೂರ್ನಿಯಲ್ಲಿ ಅವಕಾಶ ನೀಡಲಾಗಿದೆ. ಆ ತಂಡ ಗ್ರೂಪ್ ಸಿ ಯಲ್ಲಿ ಅವಕಾಶ ಪಡೆದುಕೊಂಡಿದೆ.
ಗ್ರೂಪ್ ಎ:ಭಾರತ,ಅಮೆರಿಕ
ಪಾಕಿಸ್ತಾನ,ನೆದರ್ಲ್ಯಾಂಡ್, ನಮಿಬಿಯಾ
ಗ್ರೂಪ್ ಬಿ:ಆಸ್ಟ್ರೇಲಿಯಾ,ಐರ್ಲೆಂಡ್,ಶ್ರೀಲಂಕಾ,ಜಿಂಬಾಂಬ್ವೆ, ಓಮಾನ್
ಗ್ರೂಪ್ ಸಿ:ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸ್ಕಾಟ್ಲ್ಯಾಂಡ್, ನೇಪಾಳ,ಇಟಲಿ
ಗ್ರೂಪ್ ಡಿ:ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ,ಅಫ್ಗಾನಿಸ್ತಾನ,ಕೆನಡ
ಯುಎಇ
ಇಂದಿನ ಪಂದ್ಯ:
ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಅಮೆರಿಕ ಪಡೆಯನ್ನು ಎದುರಿಸಲಿದೆ. ‘ಹಾಲಿ ಚಾಂಪಿಯನ್’ ಆಗಿರುವ ಭಾರತಕ್ಕೆ ಸತತ ಎರಡನೇ ಬಾರಿ ಟಿ20 ಕಿರೀಟ ಧರಿಸಿದ ಸಾಧನೆ ಮಾಡುವ ಅವಕಾಶ ಇದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2024ರಲ್ಲಿ ತಂಡವು ಚಾಂಪಿಯನ್ ಆಗಿತ್ತು. ನ್ಯೂಜಿಲೆಂಡ್ ಎದುರಿನ ಟಿ20 ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ವಿಕೆಟ್ಕೀಪರ್ ಇಶಾನ್ ಕಿಶನ್ ಹಾಗೂ ನಿರ್ಭೀತ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಇವರಿಬ್ಬರೂ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ಗಾಯದಿಂದ ಚೇತರಿಸಿಕೊಂಡಿರುವ ತಿಲಕ್ ವರ್ಮಾ ಮೂರನೇ ಹಾಗೂ ಲಯಕ್ಕೆ ಮರಳಿರುವ ಸೂರ್ಯ ನಾಲ್ಕನೇ ಕ್ರಮಾಂಕದಲ್ಲಿದ್ದಾರೆ. ಬೌಲರ್ಗಳಿಗೆ ಈ ನಾಲ್ವರಷ್ಟೇ ಕಠಿಣ ಸವಾಲು ಅಲ್ಲ. ರಿಂಕು ಸಿಂಗ್, ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ಈ ಸಾಲಿನಲ್ಲಿದ್ದಾರೆ. ಜಸ್ಪ್ರೀತ್ ಬೂಮ್ರಾ ಸಾರಥ್ಯದ ಬೌಲಿಂಗ್ ಪಡೆಗೆ ಈಗ ಮೊಹಮ್ಮದ್ ಸಿರಾಜ್ ಕೂಡ ಸೇರ್ಪಡೆಯಾಗಿದ್ಧಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್, ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಮ್ಮ ಮೋಡಿ ತೋರಲು ಸಿದ್ಧರಾಗಿದ್ಧಾರೆ.
ಹೋದ ಸಲದ ವಿಶ್ವಕಪ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದ ಅಮೆರಿಕ ತಂಡದಲ್ಲಿ ಬಹುತೇಕ ಭಾರತೀಯ ಆಟಗಾರರೇ ಇದ್ದಾರೆ. ಅವರೀಗ ತಮ್ಮ ತಾಯ್ನೆಲದಲ್ಲಿ ಭಾರತ ತಂಡದ ಎದುರು ಆಡಲಿದ್ದಾರೆ. ನಾಯಕ ಮೊನಾಂಕ್ ಪಟೇಲ್ ಅವರ ಸಾರಥ್ಯದ ತಂಡವು ಸವಾಲೆಸೆಯಲು ಸಿದ್ಧವಾಗಿದೆ. ಅದರಲ್ಲಿ ಕನ್ನಡಿಗ ನಾಸ್ತುಷ್ ಕೆಂಜಿಕೆ ಕೂಡ ಇದ್ದಾರೆ.
ತಂಡಗಳು:
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಇಶಾನ್ ಕಿಶನ್ (ವಿಕೆಟ್ಕೀಪರ್) ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್) ಅಭಿಷೇಕ್ ಶರ್ಮಾ ತಿಲಕ್ ವರ್ಮಾ ರಿಂಕು ಸಿಂಗ್ ಅಕ್ಷರ್ ಪಟೇಲ್ (ಉಪನಾಯಕ) ಶಿವಂ ದುಬೆ ಹಾರ್ದಿಕ್ ಪಾಂಡ್ಯ ವಾಷಿಂಗ್ಟನ್ ಸುಂದರ್ ಜಸ್ಪ್ರೀತ್ ಬೂಮ್ರಾ ಅರ್ಷದೀಪ್ ಸಿಂಗ್ ಕುಲದೀಪ್ ಯಾದವ್ ಹರ್ಷಿತ್ ರಾಣಾ ವರುಣ್ ಚಕ್ರವರ್ತಿ
ಅಮೆರಿಕ: ಮೊನಾಂಕ್ ಪಟೇಲ್ (ನಾಯಕ) ಆ್ಯಂಡ್ರೆಸ್ ಗೌಸ್ (ವಿಕೆಟ್ಕೀಪರ್) ಸಾಯಿತೇಜ್ ಮುಕ್ಕಮಲ್ಲಾ ಶಯಾನ್ ಜಹಾಂಗೀರ್ ಹರಮೀತ್ ಸಿಂಗ್ ಶಿಹಾನ್ ಜಯಸೂರ್ಯ ಸಂಜಯ್ ಕೃಷ್ಣಮೂರ್ತಿ ಮಿಲಿಂದ್ ಕುಮಾರ್ ಮೊಹಮ್ಮದ್ ಮೊಹ್ಸಿನ್ ಶುಭಂ ರಾಂಜಣೆ ಶ್ಯಾಡ್ಲಿ ವ್ಯಾನ್ ಶಾಲ್ಕವೈಕ್ ಅಲಿ ಖಾನ್ ಜಸ್ದೀಪ್ ಸಿಂಗ್ ನಾಸ್ತುಷ್ ಕೆಂಜಿಗೆ ಸೌರಭ್ ನೇತ್ರಾವಳ್ಕರ್
ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್.







