ಮಂಗಳೂರು:19ನೇ ರಾಷ್ಟ್ರೀಯ ಹಿರಿಯರ ಈಜುಸ್ಪರ್ಧೆಯ ಆರಂಭದೊಂದಿಗೆ ನಗರದ ಎಮ್ಮೆಕೆರೆ ಪ್ರದೇಶದಲ್ಲಿ ಒಲಂಪಿಕ್ಸ್ ಮಾನದಂಡದ ಪ್ರಕಾರ ನಿರ್ಮಿಸಿರುವ ಅತ್ಯಾಧುನಿಕ ಈಜುಕೊಳ ಉದ್ಘಾಟನೆಗೊಂಡಿದೆ.ವಿವಿಧ ರಾಜ್ಯಗಳ ಈಜುಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಈಜುಕೊಳ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಸುರೇಶ್ ಬಿ.ಎಸ್ ಮಾತನಾಡಿ, ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ
ಯೋಜನೆಯಡಿ ಆದಾಯ ಸೃಷ್ಟಿಸುವ ಯೋಜನೆಗಿಂತ ಹೆಚ್ಚಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನು ಮುಂದೆಯೂ ಮಹಾನಗರ ಪಾಲಿಕೆಯ ಯಾವುದಾದರೂ ಯೋಜನೆಯಡಿ ಆದಾಯ ವೃದ್ಧಿಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.
ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ನಿರ್ದಿಷ್ಟ ಯೋಜನೆ ರೂಪಿಸಿದರೆ ನಗರಾಭಿವೃದ್ಧಿ ಇಲಾಖೆಯಿಂದ 50 ಕೋಟಿ ಅನುದಾನವನ್ನು ಒದಗಿಸಲಾಗುವುದು ಎಂದರು.
ಸ್ಪೀಕರ್ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಇದ್ದರು.









