ಮೈಸೂರು: ಡಾ.ಶ್ವೇತಾ ಮಡಪ್ಪಾಡಿ ಜಾನಪದ ಶೈಲಿಯಲ್ಲಿ ರಚಿಸಿ ಹಾಡಿದ್ದ ಹಾಡುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಹಾಡಿನ ವೀಡಿಯೋವನ್ನು ಮುಖ್ಯಮಂತ್ರಿ ಅವರಿಗೆ
ಶ್ವೇತಾ ಮಡಪ್ಪಾಡಿ ತೋರಿಸಿದರು. ಹಾಡು ಕೇಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆಯಾದ ಶ್ವೇತಾ ಮಡಪ್ಪಾಡಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಚಿಸಿ ಹಾಡಿದ್ದ ಈ ಗೀತೆಯ ಬಗ್ಗೆ ಈ ಹಿಂದೆ ಎಕ್ಸ್(ಟ್ವಿಟರ್)ನಲ್ಲಿಯೂ ಮುಖ್ಯಮಂತ್ರಿಯವರು ಶ್ಲಾಘನೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು. ಇತ್ತೀಚೆಗೆ ಸಿಎಂ ಮೈಸೂರಿಗೆ ಆಗಮಿಸಿದ್ದ ಸಂದರ್ಭದದಲ್ಲಿ ಸಿಎಂ ಅವರಿಗೆ ಹಾಡನ್ನು ಕೇಳಿಸಿದ ಶ್ವೇತಾ ಮಡಪ್ಪಾಡಿ ತಾನು ಬರೆದ ಸೋ ಎನ್ನಿರೆ, ಮಲೆದೈವಗಳು, ಪಠ್ಯಪ್ರೀತಿ ಪುಸ್ತಕಗಳನ್ನು ಮುಖ್ಯಮಂತ್ರಿ ಅವರಿಗೆ ನೀಡಿದರು. ನನ್ನ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಮತ್ತು ನಾನು ಬರೆದ ಪುಸ್ತಕವನ್ಬು ಅವರಿಗೆ ನೀಡಿರುವುದು ಖುಷಿ ತಂದಿದೆ ಎಂದು ಶ್ವೇತಾ ಮಡಪ್ಪಾಡಿ ಹೇಳಿದ್ದಾರೆ.