ಸುಳ್ಯ:ಈ ಬಾರಿಯ ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿ ರುವಸ್ವರ್ಣಂ ಜ್ಯುವೆಲ್ಸ್ನಲ್ಲಿ ನಡೆಯಿತು.ಅತಿಥಿ ಗಣ್ಯರನ್ನು ಸಂಸ್ಥೆಯ ಪಾಲುದಾರರಾದ ಪ್ರವೀಣ್ ಬಿ.ಗೌಡ ಹಾಗೂ ಸಂಜೀವ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಜಿಲ್ಲಾ
ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಎಣ್ಮೂರು ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕ ಮೋಹನ್, ದೇವಚಳ್ಳ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಗೌಡ ಕೆರೆಮೂಲೆ ಹಾಗೂ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲಲಿತಾಕುಮಾರಿ ಅವರನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ ಅವರು ಸನ್ಮಾನಿಸಿ ಗೌರವಿಸಿದರು.
ಕೆ.ಆರ್ ಗಂಗಾಧರ್ ಅವರು ಮಾತನಾಡಿ, ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಿದ ಸ್ವರ್ಣಂ ಜ್ಯುವೆಲ್ಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವ ಸನ್ಮಾನ ಸ್ವೀಕರಿಸಿದ ಶಿಕ್ಷಕರು ಮಾತನಾಡಿ ತಮ್ಮ ಶಾಲೆಯ ಬಗ್ಗೆ ಅನುಭವ ಹಂಚಿಕೊಂಡರು.
ಪತ್ರಕರ್ತ ಯಶ್ವಿತ್ ಕಾಳಮ್ಮನೆ ಕಾರ್ಯಕ್ರಮ ನಿರ್ವಹಿಸಿದರು.
ಡಿ.ಜಿ ಪ್ಲಸ್ ಮಾಲಕ ಚಂದ್ರಶೇಖರ್ ನಂಜೆ, ಸಂಸ್ಥೆಯ ಪಾಲುದಾರರಾದ ಸಂಜೀವ ನಾಯ್ಕ್, ಪ್ರವೀಣ್ ಬಿ. ಗೌಡ , ಭವಿತ್, ಲೋಕೇಶ್ ಹಾಗೂ ಸಿಬ್ಬಂದಿ ಶೋಧನ್, ಪತ್ರಕರ್ತರಾದ ತೇಜೇಶ್ವರ ಕುಂದಲ್ಪಾಡಿ, ಕೆ.ಟಿ. ಭಾಗೀಶ್,ಶ್ರೀಜಿತ್ ಸಂಪಾಜೆ ಉಪಸ್ಥಿತರಿದ್ದರು.












