ಮಂಗಳೂರು: ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲು ಸಾಧ್ಯ ಎಂದು ಮಂಗಳೂರು ಸಿಟಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಅವರು ಮಂಗಳೂರು ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ ಆಯೋಜಿಸಲಾದ ಸ್ವರ ಧಾರಾ ಸಂಗೀತ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾರಂಭದಲ್ಲಿ
ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ,ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾಜಿ ಮೇಯರ್ ಹಾಗೂ ಕ್ಯಾರ್ದೋ ಲೈಟ್ ಸಂಸ್ಥೆ ಮಹಾ ಪ್ರಬಂಧಕ ಕೆ. ದಿವಾಕರ್, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮಹಾಪ್ರ ಬಂಧಕ ಅರುಣ ಪ್ರಭಾ, ಕುವೈಟ್ ನ ಇಂಜಿನಿಯರ್ ಮಂಜೇಶ್ವರ ಮೋಹನ್ ದಾಸ್ ಕಾಮತ್,ಅನಘಾ ರಿಫೈನರಿಯ ಆಡಳಿತ ನಿರ್ದೇಶಕ ಸಾಂಬಾ ಶಿವರಾವ್ ನಡೆಲ್ಲಾ,ಭಾರತ್ ಆಗ್ರೋ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ.ಅರುಣ್ ರೈ, ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ಕಲಾ ಸಾಧನ ಸಂಸ್ಥೆ ನಿರ್ದೇಶಕಿ ವಿಭಾಶ್ರೀನಿವಾಸ್ ನಾಯಕ್, ಕಲಾವಿದರಾದ ಕುಮಾರ್ ಮರ್ದು ರ್,ಅಕ್ಷಯ್ ಜೋಶಿ ಧಾರವಾಡ,ಸತೀಶ್ ಭಟ್ ಹೆಗ್ಗಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.ಪಾಂಡುರಂಗ ಆಚಾರ್ಯ ವಂದಿಸಿದರು.





