ಬೊಳುಬೈಲು:ನವಚೇತನ ಯುವಕಮಂಡಲ ಬೊಳುಬೈಲು ಮತ್ತು ಗ್ರಾಮ ಪಂಚಾಯತ್ ಜಾಲ್ಸೂರು ವತಿಯಿಂದ ಆಡ್ಕಾರು ಕೋನಡ್ಕ ಪದವಿನಲ್ಲಿರುವ ಮುಕ್ತಿಧಾಮದ(ಹಿಂದೂ ರುದ್ರಭೂಮಿ) ಸ್ವಚ್ಚತಾ ಕಾರ್ಯ ನಡೆಸಲಾಯಿತು.2020ರಲ್ಲಿ ಗ್ರಾಮ ಪಂಚಾಯತ್ನ ನರೇಗಾ ಯೋಜನೆಯಿಂದ
ಮುಕ್ತಿದಾಮವು ನಿರ್ಮಾಣಗೊಂಡಿತ್ತು. ಹಲವಾರು ಶವಗಳಿಗೆ ಮುಕ್ತಿಯನ್ನು ನೀಡಿದ್ದ ಧಾಮವು ನಂತರದ ದಿನಗಳಲ್ಲಿ ನಿರ್ವಹಣೆಯಿಲ್ಲದೆ ಪಾಳು ಬಿದ್ದಿತ್ತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ
ಸಾವಿತ್ರಿ ಆಡ್ಕಾರುಬೈಲು ಹಾಗು ಬೊಳುಬೈಲು ಯುವಕಮಂಡಲದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.ವಾರ್ಡ್ ಸದಸ್ಯೆ ಸಂಧ್ಯಾ ವಾಗ್ಲೆ , ಅಡ್ಕಾರು ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಹರಿಪ್ರಕಾಶ್ ಆಡ್ಕಾರು. ಉದಯ್ ವಾಗ್ಲೆ ಆಡ್ಕಾರು, ಗೋಪಾಲ ಬೈಲು, ಕಾಟೂರು ಶಿವರಾಮ ಗೌಡ ದಂಪತಿಗಳು ಸಹಕರಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ದಯಾನಂದ ಪಿಲಿಕೊಡಿ,ಜಯಪ್ರಕಾಶ್ ಬೈತಡ್ಕ, ನಿತಿನ್ ಆರ್ಭಡ್ಕ, ಭುವನ್ ಬೊಳುಬೈಲು, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಕಾಟೂರು, ಕಾರ್ಯದರ್ಶಿ ಚಿತ್ತರಂಜನ್ ಕಾಟೂರು, ಸದಸ್ಯರಾದ ಪ್ರವೀಣ್ ಕಾಟೂರು, ರಂಜಿತ್ ಕಾಟೂರು,ದೀಪಕ್ ಕಾಯರಡ್ಕ,ಯಕ್ಷಿತ್ ಆರ್ಭಡ್ಕ,ಮೋಕ್ಷಿತ್ ಆರ್ಭಡ್ಕ, ಜಶ್ವಿತ್ ಕಾಟೂರು, ಪ್ರಜ್ವಿನ್ ಕಾಟೂರು ಭಾಗವಹಿಸಿದ್ದರು.














