ಸುಳ್ಯ:ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಗರದ ರಥ ಬೀದಿಯಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಮರ ಸುಳ್ಯ ರಮಣೀಯ ಸುಳ್ಯ ತಂಡದ ನೇತೃತ್ವದಲ್ಲಿ ನಡೆಯಿತು. ನಗರ ಪಂಚಾಯತ್ ಹಾಗೂ
ಅಮರ ಸುಳ್ಯ ರಮಣೀಯ ತಂಡದ ವತಿಯಿಂದ ರಥಬೀದಿಯ ಕಟ್ಟೆಯಿಂದ ಎಪಿಎಂಸಿ ತನಕ ಜಾಗೃತಿ ಜಾಥಾ ನಡೆಯಿತು. ಜಾಗೃತಿ ಫಲಕಗಳನ್ನು ಹಿಡಿದು ಮೆರವಣಿಗೆ ಮೂಲಕ ಸಾಗಿ ಧ್ವನಿವರ್ಧಕದ ಮೂಲಕ ಜಾಗೃತಿಯ ಸಂದೇಶವನ್ನು ನೀಡಲಾಯಿತು. ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ ನಪಂ ಸದಸ್ಯೆ ಕಿಶೋರಿ ಶೇಟ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ರಮೇಶ್, ಪ್ರಭಾಕರನ್ ನಾಯರ್, ಡಿಎಸ್ ಗಿರೀಶ್, ಮಾಜಿ ಸೈನಿಕರ ಸಂಘದ ಮೋನಪ್ಪ, ಅಬ್ದುಲ್ ರಹಿಮಾನ್, ಹಾಗೂ ನಗರ ಪಂಚಾಯತ್ ಸಿಬ್ಬಂದಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.















