ಸುಳ್ಯ: ಸುಳ್ಯ ಅಮರ ಸಂಘಟನಾ ಸಮಿತಿ,ನಗರ ಪಂಚಾಯತ್ ಸುಳ್ಯ , ತಾಲೂಕು ಕಛೇರಿ ಸುಳ್ಯ , ತಾಲೂಕು ಪಂಚಾಯತ್ ಸುಳ್ಯ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ , ಆರಕ್ಷಕ ಠಾಣೆ ಸುಳ್ಯ , ವಕೀಲರ ಸಂಘ ಸುಳ್ಯ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ , ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 154ನೇ ಗಾಂಧಿ ಜಯಂತಿಯ ಅಂಗವಾಗಿ ಒಂದು ಹೆಜ್ಜೆ ಸ್ವಚ್ಚತೆಯ ಕಡೆಗೆ ಎನ್ನುವ ಧ್ಯೇಯದೊಂದಿಗೆ ಸ್ವಚ್ಚತಾ
ಕಾರ್ಯಕ್ರಮಕ್ಕೆ ಸುಳ್ಯ ಜ್ಯೋತಿವೃತದಿಂದ ಚಾಲನೆ ನಿಡಲಾಯಿತು. ಕಾರ್ಯಕ್ರಮವನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಅಮರ ಸಂಘಟನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂಧರ್ಭದಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್ , ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ , ನಗರ ಪಂಚಾಯತ್ ಮುಖ್ಯಧಿಕಾರಿ ಸುಧಕಾರ್ ಎಂ ಹೆಚ್ , ಸುಳ್ಯ ಪೋಲಿಸ್ ಉಪನಿರಿಕ್ಷಕ ಈರಯ್ಯ ದೊಂತೂರು, ತಾಲೂಕು ಆರೋಗ್ಯಧಿಕಾರಿ ಡಾ.ನಂದಕುಮಾರ್ , ಸುಳ್ಯ ವಕೀಲರ ಸಂಘದ ಕೋಶಧಿಕಾರಿ ಜಗದೀಶ್ ಡಿ.ಪಿ , ಸುಳ್ಯ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ , ರೋಟರಿ ವಿದ್ಯಾಸಂಸ್ಥೆ ಸಂಚಾಲಕ ಗಿರೀಜಾ ಶಂಕರ್ ತುದಿಯಡ್ಕ , ಇವರುಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ , ಉಬರಡ್ಕ ರಾಜ್ ಸೌಂಡ್ಸ್ ಮಾಲಕ ರಾಜೇಶ್ ರೈ , ವಿವಿಧ ಸಂಘ ಸಂಸ್ಥೆಯ ಮುಖಂಡರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸ್ವಚ್ಚ ಸುಳ್ಯಕ್ಕೆ ತನ್ನದೆ ಆದ ಸೇವೆ ಸಲ್ಲಿಸಿ ಇತರರಿಗೆ ಪ್ರೆರಣೆಯಾದ ನಗರ ಪಂಚಾಯತ್ ಸದಸ್ಯ ವಿನಯ ಕುಮಾರ್ ಹಾಗೂ ಪ್ರಭಾಕರ್ ನಾಯರ್ ಇಬ್ಬರನ್ನು ಸ್ವಚತಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಬಳಿಕ ಜ್ಯೋತಿವೃತದಿಂದ ಸ್ವಚ್ಚತಾ ಕಾರ್ಯ ಆರಂಭಿಸಿ ಗಾಂಧಿನಗರವಾಗಿ ಎಪಿಎಂಸಿ ಬಳಿ ಮುಕ್ತಾಯಗೊಂಡಿತು.
ಈ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು , ಶಿಕ್ಷಕವೃಂದ , ಇಲಾಖೆ ,ಸಂಘ ಸಂಸ್ಥೆಯ ಸದಸ್ಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.