ಕಾಸರಗೋಡು: ಮಂಜೇಶ್ವರ ಕ್ಷೇತ್ರದ ಎನ್. ಡಿ. ಎ ಅಭ್ಯರ್ಥಿ ಕೆ. ಸುರೇಂದ್ರನ್ ಪರವಾದ ಗೋಡೆ ಬರಹ ಮೂಲಕ ಕೇಂದ್ರ ಸಚಿವ ಸುರೇಶ್ ಗೋಪಿ ಚುನಾವಣಾ ಪ್ರಚಾರ ನಡೆಸಿದರು.ಇಂದು ಬೆಳಿಗ್ಗೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯ ಸಂದರ್ಶಿಸಿದ ಬಳಿಕ
ಕುಂಬಳೆ ಪೇಟೆಯಲ್ಲಿ ಸುರೇಶ್ ಗೋಪಿ ತಾವರೆ ಚಿಹ್ನೆ ಬರೆದು ಗೋಡೆ ಬರಹ ಉದ್ಘಾಟಿಸಿದರು.ಮಂಜೇಶ್ವರ ಮಂಡಲ ಎನ್. ಡಿ. ಅಭ್ಯರ್ಥಿ ಕೆ. ಸುರೇಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಮಂಜೇಶ್ವರ ಎನ್. ಡಿ. ಎ ಸಂಚಾಲಕ ವಿಜಯ ಕುಮಾರ್ ರೖ, ಹಿರಿಯ ನಾಯಕ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ, ಕುಂಬಳೆ ಮಂಡಲಾಧ್ಯಕ್ಷ ಸುನಿಲ್ ಅನಂತಪುರ ಸೇರಿದಂತೆ
ಪ್ರಮುಖ ಕಾರ್ಯಕರ್ತರು ಪಾಲ್ಗೊಂಡರು.ಇಂದು ಬೆಳಿಗ್ಗೆ ಕಾಸರಗೋಡು ತಲುಪಿದ ಕೇಂದ್ರ ಸಚಿವ, ನಟ ಸುರೇಶ್ ಗೋಪಿ ಜಿಲ್ಲೆಯ ಎನ್. ಡಿ. ಎ ಅಭ್ಯರ್ಥಿಗಳ ಪರ ಪ್ರಚಾರದ ಗೋಡೆ ಬರಹ ಬರೆದರು. ಕುಂಬಳೆಯಲ್ಲಿ ಗೋಡೆ ಬರಹ ಬರೆದ ಅವರು ಬಳಿಕ ಅನಂತಪುರ ಕ್ಷೇತ್ರ ಸಂದರ್ಶಿಸಿದರು. ಬಳಿಕ ಕಾಸರಗೋಡು ನಗರದಲ್ಲಿ ಎನ್. ಡಿ. ಎ ಅಭ್ಯರ್ಥಿ ಪರವಾದ ಗೋಡೆ ಬರಹ ಬರೆದು ಪ್ರಚಾರಕ್ಕೆ ಚುರುಕು ಮುಟ್ಟಿಸಿದರು.










