ಲಾಹೋರ್: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 7 ವಿಕೆಟ್ಗಳಿಂದ ಬಾಂಗ್ಲಾದೇಶದ ಎದುರು ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ
ವೇಗದ ಬೌಲರ್ಗಳಾದ
ಹ್ಯಾರಿಸ್ ರವೂಫ್ (19ಕ್ಕೆ4) ಮತ್ತು ನಸೀಂ ಶಹಾ (34ಕ್ಕೆ3) ಅವರ ದಾಳಿಯ ಮುಂದೆ ಕುಸಿದು 38.4 ಓವರ್ಗಳಲ್ಲಿ 8 ವಿಕೆಟ್ಗಳಿಗೆ 193 ರನ್ಗಳ ಸಾಧಾರಣ ಮೊತ್ತ ಗಳಿಸಿತು.
ಶಕೀಬ್ (53; 57ಎ, 4X7) ಮತ್ತು ಮುಷ್ಫೀಕುರ್ ರಹೀಂ (64; 87ಎ, 4X5) ಐದನೇ ವಿಕೆಟ್ ಜೊತೆಯಾಟದಲ್ಲಿ ನೂರು ರನ್ ಸೇರಿಸಿದರು. ಅಲ್ಪ ಚೇತರಿಕೆ ನೀಡಿದರು.
ಗುರಿ ಬೆನ್ನಟ್ಟಿದ ಪಾಕ್ ತಂಡವು 39.3 ಓವರ್ಗಳಲ್ಲಿ 3 ವಿಕೆಟ್ಗಳಿಗೆ 194 ರನ್ ಗಳಿಸಿ ಗೆದ್ದಿತು. ಆರಂಭಿಕ ಬ್ಯಾಟರ್ ಇಮಾಮ್ ಉಲ್ ಹಕ್ (78; 84ಎ) ಮತ್ತು ಮೊಹಮ್ಮದ್ ರಿಜ್ವಾನ್ (ಔಟಾಗದೆ 63; 79ಎ) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.