ಸುಳ್ಯ:ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ ಡಿ.28ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ದಿನಪೂರ್ತಿ ನಡೆಯುವ ಸಂಗೀತೋತ್ಸವದ ಅಂಗವಾಗಿ
ಬೆಳಗ್ಗೆ 9.30ರಿಂದ ದೀಪೋಜ್ವಲನ,ಗುರುವಂದನೆ,ಸುನಾದ ಸಂಗೀತ ಕಲಾ ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ
ನಡೆಯಲಿದೆ. ಮಧ್ಯಾಹ್ನ 12ರಿಂದ ‘ಪಂಚರತ್ನ ಗೋಷ್ಠಿ ಗಾಯನ’ ನಡೆಯಲಿದೆ.
ಸಂಜೆ 5.30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಿದ್ವಾನ್ ಹೆಮ್ಮಿಗೆ ಎಸ್. ಪ್ರಶಾಂತ್ ಅವರ ಹಾಡುಗಾರಿಕೆ ನಡೆಯಲಿದೆ. ವಯಲಿನ್ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭೋಗ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ತುಮಕೂರು ಬಿ. ಶಶಿಶಂಕರ್ ಸಹಕರಿಸಲಿದ್ದಾರೆ ಎಂದು ಸುನಾದ ಸಂಗೀತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















