ಸುಳ್ಯ: ಸಂಗೀತ ಗುರು ವಿದ್ವಾನ್ ಕಾಂಚನ ಎ.ಈಶ್ವರ ಭಟ್ ನೇತೃತ್ವದ ಸುನಾದ ಸಂಗೀತ ಶಾಲೆಯ ಸುಳ್ಯ ಶಾಖೆಯ ವತಿಯಿಂದ ಸುನಾದ ಸಂಗೀತೋತ್ಸವ ಜ.28ರಂದು ಯುವಜನ ಸಂಯುಕ್ತ ಮಂಡಳಿಯ ರಂಗ ಮಂದಿರದಲ್ಲಿ ನಡೆಯಲಿದೆ. ದಿನ ಪೂರ್ತಿ ನಡೆಯುವ ಕಾರ್ಯಕ್ರಮದ ಅಂಗವಾಗಿ
ಪೂ.10ಕ್ಕೆ ದೀಪೋಜ್ವಲನ ನಡೆಯಲಿದೆ. ಬಳಿಕ ಗುರು ವಂದನೆ, ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಖ್ಯಾತ ಸಂಗೀತಗಾರರಾದ ವಿದ್ವಾನ್ ವಿಷ್ಣುದೇವ ನಂಬೂದಿರಿ ಚೆನ್ನೈ ಅವರಿಂದ ಹಾಡುಗಾರಿಕೆ ನಡೆಯಲಿದೆ. ವಯಲಿನ್ನಲ್ಲಿ ಎಡಪ್ಪಳ್ಳಿ ಅಜಿತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ.ಈಶ್ವರ ಭಟ್ ಮೋರ್ಸಿಂಗ್ನಲ್ಲಿ ವಿದ್ವಾನ್ ಪಯ್ಯನ್ನೂರ್ ಗೋವಿಂದ ಪ್ರಸಾದ್ ಸಹಕರಿಸಲಿದ್ದಾರೆ ಎಂದು ಸುನಾದ ಸಂಗೀತ ಶಾಲೆಯ ಪ್ರಕಟಣೆ ತಿಳಿಸಿದೆ.










