ಸುಳ್ಯ:ಪುತ್ತೂರು ಸುನಾದ ಸಂಗೀತ ಶಾಲೆಯ ವತಿಯಿಂದ ಸುನಾದ ಸಂಗೀತೋತ್ಸವ ಪುತ್ತೂರು ಸುದಾನ ವಸತಿಯುಕ್ತ ಶಾಲಾ ವಠಾರದಲ್ಲಿ ನಡೆಯಿತು. ಎರಡು ದಿನಗಳ ಸಂಗೀತೋತ್ಸವ ಕಾರ್ಯಕ್ರಮವನ್ನು ಜ.10 ರಂದು ಶಾಲಾ ಸಂಚಾಲಕ ವಿದ್ವಾನ್ ಕಾಂಚನ ಎ ಈಶ್ವರ ಭಟ್ ದೀಪ ಬೆಳಗಿ ಉದ್ಘಾಟಿಸಿದರು.ವಿಜಯಶ್ರೀ, ಸವಿತಾ,ಧನ್ಯಶ್ರೀ, ಸೌರಭ ಉಪಸ್ಥಿತರಿದ್ದರು.ಬಳಿಕ
ಸುನಾದ ಶಾಲೆಯ ಸಂಗೀತ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಸಂಜೆ ಕರ್ನಾಟಕ ಶಾಸ್ತ್ರೀಯ ವೇಣು ವಾದನ ಕಛೇರಿ ನಡೆಯಿತು. ವೇಣುವಾದನದಲ್ಲಿ ವಿದ್ವಾನ್ ವಿ ವಂಶೀಧರ್ ಮೈಸೂರು, ವಯಲಿನ್ನಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭಾಗ್, ಮೃದಂಗದಲ್ಲಿ ಡಾ.ಅಕ್ಷಯ್ ನಾರಾಯಣ ಕಾಂಚನ, ಮೋರ್ಸಿಂಗ್ನಲ್ಲಿ ವಿದ್ವಾನ್ ಬಾಲಕೃಷ್ಣ ಭಟ್ ಹೊಸಮನೆ ಸಹಕರಿಸಿದರು.
ಜ.11 ರಂದು ಬೆಳಿಗ್ಗಿನಿಂದ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಪಂಚರತ್ನ ಗೋಷ್ಠಿ ಗಾಯನ ನಡೆಯಿತು.ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ಟಿ.ವಿ.ರಾಮ್ ಪ್ರಸಾದ್ ಅವರ ಹಾಡುಗಾರಿಕೆ ಮನಸೂರೆಗೊಂಡಿತು. ವಯಲಿನ್ನಲ್ಲಿ ಮೈಸೂರು ವಿ ಶ್ರೀಕಾಂತ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಘಟಂನಲ್ಲಿ ವಿದ್ವಾನ್ ಶರತ್ ವಿ ಕೌಶಿಕ್ ಮೈಸೂರು ಭಾಗವಹಿಸಿದರು.












