ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಸಾರಥ್ಯದಲ್ಲಿ 3ನೇ ವರ್ಷದ ‘ಸುಳ್ಯೋತ್ಸವ 2026’ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಕಲಾವೇದಿಕೆಯಲ್ಲಿ ನಡೆಯಿತು.ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ಏರ್ಪಡಿಸಿದ ಸುಳ್ಯೋತ್ಸವದಲ್ಲಿ ಖ್ಯಾತ ಕಲಾವಿದರು,ಕಲಾ ತಂಡಗಳ ವತಿಯಿಂದ
ಸಾಂಸ್ಕೃತಿಕ ಕಲಾ ವೈಭವ ಮನಸೂರೆಗೊಂಡಿತು. ಲೋಕ ಏರಿಯಲ್ ಡಾನ್ಸ್ ತಂಡ ಬೆಂಗಳೂರು, ಸ್ವಾಹ ವಿಶುವಲ್ ಆರ್ಟ್ಸ್ ಬೆಂಗಳೂರು, ಡಿ-ಯುನೈಟೆಡ್ ಸುಳ್ಯ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸುಳ್ಯ, ನೃತ್ಯ ಸಾರಂಗ ಕಲಾಕುಟೀರ ಗುತ್ತಿಗಾರು ಮತ್ತಿತರ ತಂಡಗಳಿಂದ
ಸಾಂಸ್ಕೃತಿಕ ವೈಭವ ನಡೆಯಿತು.

ಏರಿಯಲ್ ಸಿಲ್ಕ್, ಫೈರ್ ಡ್ಯಾನ್ಸ್, ಬಾಲಿವುಡ್,ಭರತನಾಟ್ಯ, ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್
ನಮ್ಮ ಕಲಾವಿದೆರ್ ಬೆದ್ರ ಇವರಿಂದ ‘ವೈರಲ್ ವೈಶಾಲಿ’
ಕಾರ್ಯಕ್ರಮ ಪ್ರದರ್ಶನಗೊಂಡಿತು.
ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಸುಳ್ಯೋತ್ಸವದ ರುವಾರಿ ಅಕ್ಷಯ್.ಕೆ.ಸಿ. ಮಾತನಾಡಿದರು. ಮಹಾನಟಿ ಖ್ಯಾತಿಯ ವಂಶಿ ಅವರಿಗೆ ‘ರೈಸಿಂಗ್ ಸ್ಟಾರ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಸುಳ್ಯೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರ್ಜೆ ತ್ರಿಶೂಲ್ ಕಾರ್ಯಕ್ರಮ ನಿರೂಪಿಸಿದರು.













