ಸುಳ್ಯ:ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಕಳೆದರೂ ತಾಲೂಕು ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ತುಂಬಿರುವ ಹಿನ್ನಲೆಯಲ್ಲಿ ತಾಲೂಕು 60ರ ಸಂಭ್ರಮ ಆಚರಣಾ ಸಮಿತಿಯ ವತಿಯಿಂದ ಜಾನಕಿ ವೆಂಕಟ್ರಮಣ ಗೌಡ ಸಭಾಭವನ ಅಮರಶ್ರೀಭಾಗ್ನಲ್ಲಿ ನಡೆದ ಸುಳ್ಯ 60 ಸಂಭ್ರಮಾಚರಣೆಯ ಅಂಗವಾಗಿ ಏರ್ಪಡಿಸಿದ
‘ಸುಳ್ಯ ಅಂದು ,ಇಂದು, ಮುಂದು’ ಎಂಬ ವಿಚಾರ ಸಂಕಿರಣದಲ್ಲಿ ‘ಸುಳ್ಯ ಇಂದು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.ಸುಳ್ಯ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ.1991ರಲ್ಲಿ ಡಿಪಿಆರ್ ಆದ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಇನ್ನೂ ಆಗಿಲ್ಲ, ತಾಲೂಕಿಗೆ ಒಂದು ಸುಸಜ್ಜಿತ ಪುರಭವನ, ಅಂಬೇಡ್ಕರ್ ಭವನ, ರಂಗಮಂದಿರ, ಕ್ರೀಡಾಂಗಣ ಇನ್ನೂ ಮರೀಚಿಕೆಯಾಗಿದೆ, ಕೃಷಿ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ ಆಗಿಲ್ಲ. ಇಲ್ಲಿನ ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಸುಳ್ಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆದಿದೆ, ಕ್ರಿಯಾಶೀಲ ಮಾಧ್ಯಮಗಳಿಂದ ಸುಳ್ಯದ ಜೀವಂತಿಕೆ ಉಳಿದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಕರ್ಪ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ-ಎಂ.ಬಿ:
‘ಸುಳ್ಯ ಅಂದು’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ರಾಜಕೀಯ ಐಕ್ಯತೆ, ದೂರದೃಷ್ಠಿಯಿಂದ ತಾಲೂಕು ರಚನೆ ಸಾಧ್ಯವಾಯಿತು. ಶೈಕ್ಷಣಿಕ ಬೆಳವಣಿಗೆ ನಡೆದಂತೆ ಇಲ್ಲಿ ಸಂಪರ್ಕ ಬೆಳವಣಿಗೆ ಸಾಧ್ಯವಾಗಿದೆ.ಹಲವಾರು ರಾಜಕೀಯ ಏಳು ಬೀಳುಗಳು ಕಂಡಿದೆ ಎಂದರು.

ಕೃಷಿ, ರೈಲು, ರಸ್ತೆ, ವಿದ್ಯುತ್ಗೆ ಆದ್ಯತೆ ಆಗಬೇಕು: ಕುತ್ತಮೊಟ್ಟೆ
ಸುಳ್ಯ ಮುಂದು ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಅಡಿಕೆ ಕೃಷಿ ನಾಶವಾದ ಹಿನ್ನಲೆಯಲ್ಲಿ ಬಹುಬೆಳೆ ಪದ್ಧತಿಗೆ ರೈತರು ಆದ್ಯತೆ ನೀಡಬೇಕು, ಸರಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಕೃಷಿ ನಾಶವಾದ ರೈತರ ಸಾಲ ಮನ್ನಾ ಮಾಡಬೇಕು, ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು. ಸುಳ್ಯದ

110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಪೂರ್ತಿಯಾಗಬೇಕು. ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ, ಪುತ್ತೂರು-ಸುಳ್ಯ-ಕುಶಾಲನಗರ ರೈಲು ಮಾರ್ಗ ನಿರ್ಮಾಣ ಮಾಡಬೇಕು, ವಿದ್ಯುತ್, ನೀರು ರಸ್ತೆ, ಸೇರಿ ಮೂಲಭೂತ ಅಭಿವೃದ್ಧಿಯ ಜೊತೆಗೆ ಕೈಗಾರಿಕಾ ಪಾರ್ಕ್, ಕ್ರೀಡಾ ಸಂಕೀರ್ಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕ ಕೆ.ಕುಶಲ,
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ,
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ,
ಎಒಎಲ್ಇ ಅಧ್ಯಕ್ಷರು ಹಾಗೂ
ಸುಳ್ಯ ತಾಲೂಕು 60ರ ಸಂಭ್ರಮ ಆಚರಣಾ ಸಮಿತಿಯ ಗೌರವಾಧ್ಯಕ್ಷ
ಡಾ.ಕೆ.ವಿ.ಚಿದಾನಂದ , ಕಾರ್ಯಧ್ಯಕ್ಷ ಎಸ್.ಎನ್. ಮನ್ಮಥ, ಸಮಿತಿ ಉಪಾಧ್ಯಕ್ಷರಾದ ತಾಹಶೀಲ್ದಾರ್ ಮಂಜುಳಾ ಎಂ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರಧ್ವಜ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ, ವೆಂಕಟ್ ವಳಲಂಬೆ, ಜೆಡಿಎಸ್ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸಂಭ್ರಮಾಚರಣಾ ಸಮಿತಿಯ
ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ,ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್,ಕೋಶಾಧಿಕಾರಿ ಸಂತೋಷ್ ಜಾಕೆ,ಸಂಘಟನಾ ಕಾರ್ಯದರ್ಶಿ ವೆಂಕಟ್ ದಂಬೆಕೋಡಿ, ಕಾರ್ಯದರ್ಶಿಗಳಾದ ದಿನೇಶ್ ಮಡಪ್ಪಾಡಿ, ಪಿ.ಎಸ್ ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.












