ಸುಳ್ಯ:ಸುಳ್ಯ ನಗರ ಪಂಚಾಯತ್ಗೆ ಮಹಾ ಯೋಜನೆ ಅನುಷ್ಠಾನ ಮಾಡಲು ತಾತ್ಕಾಲಿಕ ಅನಮತಿ ನೀಡಲಾಗಿದೆ. ಈ ಕುರಿತು ಸಾರ್ವಜನಿಕರಿಗಾಗಿ ಆಕ್ಷೇಪಣೆಗಳು ಇದ್ದರೆ 60 ದಿನದೊಳಗೆ ಸಲ್ಲಿಸುವಂತೆ ಸುಳ್ಯ ನಗರ ಪಂಚಾಯತ್ ಪ್ರಕಟಣೆ ನೀಡಿದೆ.
ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರವು ಸುಳ್ಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ, ನಕ್ಷೆ ಮತ್ತು ವರದಿಯೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಲಾದ
ಹಿನ್ನಲೆಯಲ್ಲಿ ಪ್ರದೇಶದ ಮಹಾಯೋಜನೆಗೆ ತಾತ್ಕಾಲಿಕವಾಗಿ ಅನುಮೋದನೆಯನ್ನು ನೀಡಲಾಗಿದೆ.ಈ ತಾತ್ಕಾಲಿಕ ಅನುಮೋದಿತ ಮಹಾಯೋಜನೆ ನಕ್ಷೆ ಮತ್ತು ವರದಿಯನ್ನು ಸುಳ್ಯ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆ, ಆಕ್ಷೇಪಣೆಗಳು, ಸೂಚನೆಗಳು ಇದ್ದಲ್ಲಿ 60 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ.
ಸುಳ್ಯ ನಗರ ಪಂಚಾಯತ್ಗೆ ಮಹಾಯೋಜನೆಗೆ ತಾತ್ಕಾಲಿಕ ಅನುಮತಿಯಾಗಿದ್ದು ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಆಹ್ವಾನಿಸಲಾಗಿದೆ. ಈ ಯೋಜನೆ ಕುರಿತು, ನಿರ್ದಿಷ್ಟವಾದ ಸಲಹೆ, ಸೂಚನೆ, ಆಕ್ಷೇಪಣೆಗಳು ಇದ್ದಲ್ಲಿ 60 ದಿನಗಳಲ್ಲಿ ಸಲ್ಲಿಸಬಹುದು ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ತಿಳಿಸಿದ್ದಾರೆ.
‘ಈ ಹಿಂದೆಯೇ ಮಹಾ ಯೋಜನೆಯ ಕರಡು ಮಂಜೂರಾತಿಯಾಗಿ ಬಂದಿತ್ತು. ಆದರೆ ಅದು ಸುಳ್ಯ ನಗರಕ್ಕೆ ಸೂಕ್ತವಾಗಿಲ್ಲ, ಅದಕ್ಕೆ ಸೂಕ್ತವಾದ ಮಾರ್ಪಾಡು ಆಗಬೇಕು ಎಂದು ಅದನ್ನು ನಗರ ಪಂಚಾಯತ್ ಆಡಳಿತ ಮಂಡಳಿ ತಿರಸ್ಕಾರ ಮಾಡಲಾಗಿತ್ತು. ಮಹಾಯೋಜನೆಯ ಕರಡು ವರದಿಯಲ್ಲಿ ತಿಳಿಸಿದ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡುವುದು ಸುಳ್ಯ ನಗರಕ್ಕೆ ಸೂಕ್ತ ಅಲ್ಲ. ಇಲ್ಲಿಗೆ ಸೂಕ್ತ ಆಗುವಂತೆ ಅಗತ್ಯ ಮಾರ್ಪಾಡು, ಸರಳೀಕರಣ ಆಗಬೇಕಾಗಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.