ಸುಳ್ಯ:ಸುಳ್ಯ ನಗರ ಕಾಂಗ್ರೆಸ್ ವಾರ್ಡ್ ಸಮಿತಿಗಳ ಪುನರ್ ರಚನೆ ಮತ್ತು ವಾರ್ಡ್ ಉಸ್ತುವಾರಿಗಳ ನೇಮಕಾತಿ ಕುರಿತು ನಗರ ಕಾಂಗ್ರೆಸ್ ಸಮಿತಿ ಸಭೆ ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಸುಳ್ಯ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಗರದ ವಾರ್ಡ್ ಸಂಘಟನೆಗಳ ಬಲವರ್ಧನೆ ಮಾಡಲು, ನಗರ ಪಂಚಾಯತ್ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಲು ಎಲ್ಲಾ ಪ್ರಯತ್ನ ನಡೆಸಲು ನಿರ್ಧರಿಸಲಾಯಿತು.ಸಭೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ, ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ಅಂಬೆಕಲ್ಲು, ಸುಳ್ಯ ನಗರ ಪಂಚಾಯಿತಿ ಮಾಜಿ ಸದಸ್ಯ ಗೋಕುಲ್ ದಾಸ್, ಕಾಂಗ್ರೆಸ್ ನ ಹಿರಿಯ ಸದಸ್ಯ ಪಿ.ಎ ಮಹಮ್ಮದ್, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ ಮತ್ತು ಶಿಲ್ಪಾ ಇಬ್ರಾಹಿಂ, ಜಿಲ್ಲಾ ಕೆಡಿಪಿ ಸದಸ್ಯೆ ಸುಜಯಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ
ನಂದರಾಜ್ ಸಂಕೇಶ, ಇಂಟಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸುಳ್ಯ ಬ್ಲಾಕ್ ಎಸ್.ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ನಗರ ಪಂಚಾಯತ್ ಮಾಜಿ ಸದಸ್ಯರಾದ ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಸುಳ್ಯ ಸಿದ್ದೀಕ್ ಕೊಕ್ಕೊ, ರಾಜು ಪಂಡಿತ್ ಮತ್ತು ಭಾಸ್ಕರ್ ಪೂಜಾರಿ, ಶಿವಕುಮಾರ್ ಕಂದಡ್ಕ, ಪ್ರೇಮಾ ಟೀಚರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಹೀದ್ ಪಾರೆ ಮತ್ತು ಸುರೇಶ್ ಕಾಮತ್ ಜಯನಗರ, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ರಕ್ಷಿತ್ ದೊಡ್ಡಡ್ಕ, ಮನ್ಸೂರ್ ಮೆಟ್ರೋ, ಮನೋಜ್ ತೊಡಿಕಾನ, ವಾರ್ಡ್ ಪ್ರಮುಖರಾದ ಜತ್ತಪ್ಪ ರೈ, ಹಸೈನಾರ್, ಹುಸೈನಾರ್, ಹನೀಫ್ ಕೊಳಂಜಿಕೋಡಿ, ಚಂದ್ರಶೇಖರ ನಾಯ್ಕ ಕಂದಡ್ಕ, ಪಕ್ಕಿರೇಶ್, ಸುರೇಶ್ ಹಳೆಗೇಟು, ಎಚ್.ಎ ಉಮ್ಮರ್, ಇಕ್ಬಾಲ್ ಸುಣ್ಣಮೂಲೆ, ಕೆ ಮಹಮ್ಮದ್, ಕಲ್ಲುಮುಟ್ಲು, ಕೆ ಎಲ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.





