ಸುಳ್ಯ:ಸುಳ್ಯ-ಕಲ್ಲಪ್ಪಳ್ಳಿ-ಪಾಣತ್ತೂರು ಅಂತಾರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು, ಮರ ಸಮೇತ ಗುಡ್ಡಜರಿದು ರಸ್ತೆ ಬಂದ್ ಆಗಿದೆ. ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು ಮತ್ತು ನಡೆದು ಹೋಗಲು ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆ ಬಂದ್ ಆಗಿದೆ. ಬಡ್ಡಡ್ಕ-ರಂಗತ್ತಮಲೆ-ಕಲ್ಲಪಳ್ಳಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಪ್ರಯಾಣಿಸಬಹುದು.