ಸುಳ್ಯ: ಸುಳ್ಯದ ನೂತನ ತಹಶೀಲ್ದಾರ್ ಆಗಿ ಮಂಜುಳಾ ಎಂ. ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅ.14ರಂದು ಅವರು ಸುಳ್ಯ ತಾಲೂಕು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.ಸುಳ್ಯ ತಹಶೀಲ್ದಾರ್ ಆಗಿದ್ದ
ಜಿ.ಮಂಜುನಾಥ್ ಅವರು ವರ್ಗಾವಣೆ ಆದ ಕಾರಣ ಖಾಲಿ ಇರುವ ಹುದ್ದೆಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ಗ್ರೇಡ್-1 ತಹಶೀಲ್ದಾರ್ ಮಂಜುಳಾ ಎಂ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿತ್ತು. ಮಂಜುಳಾ ಎಂ.ಅವರು ಬೆಂಗಳೂರಿನವರು. ಇದುವರೆಗೆ ಸುಳ್ಯ ಪ್ರಭಾರ ತಹಶೀಲ್ದಾರ್ ಆಗಿ ಪ್ರೊಬೇಷನರಿ ಅಧಿಕಾರಿ ಅರವಿಂದ ಕೆ.ಎಂ. ಕರ್ತವ್ಯದಲ್ಲಿದ್ದರು.