ಸುಳ್ಯ:ಸುಳ್ಯ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಸಾರಿದ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ಸುಳ್ಯದಲ್ಲಿ ನಡೆಯಿತು. ಸುಮಾರು 30ಕ್ಕೂ ಅಧಿಕ ಕಲಾ ತಂಡಗಳು ಪ್ರದರ್ಶಿಸಿದ ಕಲಾ ಪ್ರದರ್ಶನಗಳು ಮನ ಸೆಳೆಯಿತು. ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯನ್ನು ಸಾರಿದ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1500ನೇ ಜನ್ಮದಿನದ ಮಾಸಾಚರಣೆ ಅಂಗವಾಗಿ

ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಮಿಲಾದ್ ಕಾಲ್ನಡಿಗೆ ಜಾಥಾ ಮತ್ತು ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ ಪ್ರವಾದಿ ಸಂದೇಶ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮೊಗರ್ಪಣೆ ಮಸೀದಿ ಬಳಿಯಿಂದ ಆರಂಭಗೊಂಡ ಜಾಥಾದಲ್ಲಿ 30ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಿದವು.

ಶಿಸ್ತುಬದ್ಧ ಸ್ಕೌಟ್ ತಂಡಗಳು, ಇಸ್ಲಾಮಿಕ್ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಧಪ್ ತಂಡಗಳು ಜಾಥಾಕ್ಕೆ ಮೆರುಗು ನೀಡಿತು. ಪ್ರವಾದಿ ಕೀರ್ತನೆ, ಸಂದೇಶ ಸಾರುವ ಘೋಷವಾಕ್ಯ ಮೊಳಗಿಸಿದ ಜಾಥಾ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಸಮಾಪನಗೊಂಡಿತು. ನೂರಾರು ಮಂದಿ ಜಾಥಾದಲ್ಲಿ ಭಾಗವಹಿಸಿದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಮಂದಿ ಜಾಥಾವನ್ನು ವೀಕ್ಷಿಸಿದರು.

ಮೊಗರ್ಪಣೆ ಜುಮಾ ಮಸೀದಿಯ ಮುದರ್ರೀಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ಪ್ರಾರ್ಥನೆ ನೆರವೇರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಸಹಾಯಕ ಮುದರ್ರೀಸ್ ಶಾಹಿಝ್ ಜೌಹರಿ, ತಾಲೂಕು ಮಿಲಾದ್ ಸಮಿತಿಯ ಅಧ್ಯಕ್ಷ ಜುನೈದ್ ಎನ್.ಎ., ಸಂಚಾಲಕ ಕೆ.ಎಸ್.ಉಮ್ಮರ್,ಖಜಾಂಜಿ ಉನೈಸ್ ಪೆರಾಜೆ, ಕಾರ್ಯದರ್ಶಿ ಅಝೀಝ್ ಸಂಗಂ, ಜೊತೆ ಕಾರ್ಯದರ್ಶಿ ಮುನಾಫರ್ ಸುಳ್ಯ, ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ, ಅಬ್ದುಲ್ ಖಾದರ್ ಸಂಗಂ, ಮಿರಾಝ್ ಸುಳ್ಯ, ಇಕ್ಬಾಲ್ ಸುಣ್ಣಮೂಲೆ, ನವಾಸ್ ಜಯನಗರ, ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬ್ದುಲ್ ಕಲಾಂ, ಅಬ್ದುಲ್ ಮಜೀದ್ ಜನತಾ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಜಿ.ಕೆ.ಹಮೀದ್, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಸುಣ್ಣಮೂಲೆ, ಮುಸ್ತಫ ಮೊಗರ್ಪಣೆ ಮತ್ತಿತರರು ಉಪಸ್ಥಿತರಿದ್ದರು.















