ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್(ಆರ್ಟಿಫಿಶಿಯಲ್ ಇನ್ಟೆಲಿಜೆನ್ಸ್ & ಮೆಶಿನ್ ಲರ್ನಿಂಗ್) ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಅನ್ವಯ’ ಕಾಲೇಜಿನ ಸಭಾಭವನದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ
ದೀಕ್ಷಿತ್ ಬೆಳ್ಳಾರೆ, ಲೀಡ್ ಇಂಜಿನಿಯರ್, ಆ್ಯಪಲ್ ಅವರು ಉದ್ಘಾಟನೆ ನೆರವೇರಿಸಿದರು.ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಸಿ.ಕೆ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಸುರೇಶ ವಿ.
ಮಾತನಾಡಿದರು.
ವೈಯಕ್ತಿಕ ಬ್ರ್ಯಾಂಡಿಂಗ್ ಮತ್ತು ಉದ್ಯಮ ಸಿದ್ಧತೆಯ ಪ್ರಾಮುಖ್ಯತೆ ಬಗ್ಗೆ ದೀಕ್ಷಿತ್ ಬೆಳ್ಳಾರೆ ತಾಂತ್ರಿಕ ಉಪನ್ಯಾಸ ನೀಡಿದರು. ವಿದ್ಯಾರ್ಥಿ ಸಂಘದ ಲೀಲಾ ಸಾಯಿರಾಮ್ ಸ್ವಾಗತಿಸಿ, ನಿಖಿಲ್ ವಾರ್ಷಿಕ ವರದಿ ಓದಿದರು. ಶ್ರೀರಕ್ಷಾ ವಂದಿಸಿದರು. ಸಂಯೋಜಕರಾದ ಪ್ರೊ. ವೆಂಕಟೇಶ್ ಯು.ಸಿ. ಹಾಗೂ ಪ್ರೊ. ಕಿಶೋರ್ ಕುಮಾರ್ ಕೆ. ಸಲಹೆಗಾರರಾದ
ಡಾ. ಬಾಲಪ್ರದೀಪ್ ಕೆ.ಎನ್ ಹಾಗೂ ಡಾ. ಪ್ರಜ್ಞ ಎಂ.ಆರ್ ಹಾಗೂ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ತಹಕೌಸರ್ ಮತ್ತು ರೂಪ ಕಾರ್ಯಕ್ರಮವನ್ನು ನಿರೂಪಿಸಿದರು.













