ಸುಳ್ಯ:ಮೈ ಭಾರತ್ ದ.ಕ. ಜಿಲ್ಲೆ ಮಂಗಳೂರು, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಮುಂಭಾಗದ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಮೈ ಭಾರತ್ ದ.ಕ.ಜಿಲ್ಲಾ
ಯುವ ಸಮನ್ವಯ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಉದ್ಘಾಟಿಸಿದರು.ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಸುಳ್ಯದ ಕ್ರೈಂ ಎಸ್ಐ ಸರಸ್ವತಿ ಕ್ರೀಡಾಕೂಟ ಉದ್ಘಾಟಿಸಿದರು.ಸುಳ್ಯ ತಹಶಿಲ್ದಾರ್ ಮಂಜುಳಾ ಎಂ, ಮೈ ಭಾರತ್ ಅಧಿಕಾರಿ ಜಗದೀಶ್ ಮುಖ್ಯ ಅತಿಥಿಯಾಗಿದ್ದರು.
ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಮಧುಮತಿ ಬೊಳ್ಳೂರು, ಕಾರ್ಯದರ್ಶಿ ಹೇಮಾ ವೇಣುಗೋಪಾಲ್,ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ ರೈ, ಅಧ್ಯಕ್ಷೆ ಚಿತ್ರಲೇಖಾ ಮಡಪ್ಪಾಡಿ, ಯುವಜನ ಸಂಯುಕ್ತ ಮಂಡಳಿಯ

ಅಧ್ಯಕ್ಷ ಪವನ್ ಪಲ್ಲತ್ತಡ್ಕ,ಗೌರವಾಧ್ಯಕ್ಷ ಪ್ರವೀಣ್ ಜಯನಗರ ಉಪಸ್ಥಿತರಿದ್ದರು.ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾ ರಾಧಾಕೃಷ್ಣ ಸ್ವಾಗತಿಸಿ, ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹೇಮಾ ವೇಣುಗೋಪಾಲ್ ವಂದಿಸಿದರು.ಮಾನಸ ಮಹಿಳಾ ಮಂಡಲದ ಕಾರ್ಯದರ್ಶಿ ಅನನ್ಯ ಅನಿಲ್ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದಲ್ಲಿ ಯುವತಿಯರಿಗೆ ಖೋಖೋ, ಶಾಟ್ ಪುಟ್, 100 ಮೀ. ಓಟ, ಪುರುಷರಿಗೆ ವಾಲಿಬಾಲ್, ಶಾಟ್ ಪುಟ್ ಮತ್ತು 100 ಮೀ. ಓಟ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಸ್ಲೋ ಸ್ಕೂಟಿ ರೇಸ್, ಶಾಟ್ ಫುಟ್ ಸ್ಪರ್ಧೆಗಳು ನಡೆಯಿತು.





