ಸುಳ್ಯ:ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿಯ ಸುಳ್ಯ ಕರಯೋಗಂ ವತಿಯಿಂದ ಓಣಂ ಹಬ್ಬ ಆಚರಣೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಸಾಧಕರಿಗೆ ಸನ್ಮಾನ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.ಕೇರಳ ಎನ್ಎಸ್ಎಸ್ ಡೈರೆಕ್ಟರ್ ಬೋರ್ಡ್ ಸದಸ್ಯ ಎ.ಬಾಲಕೃಷ್ಣ ನಾಯರ್ ಉದ್ಘಾಟಿಸಿದರು. ಕೆಎನ್ಎಸ್ಎಸ್
ಬೋರ್ಡ್ ಸದಸ್ಯ ರಾಜನ್ ನಂಬ್ಯಾರ್, ಮಂಗಳೂರು ಕರಯೋಗಂನ ಕಾರ್ಯಕಾರಿ ಸಮಿತಿ ಸದಸ್ಯ ಇ.ವಾಮನನ್ ನಾಯರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಮುಖ್ಯ ಅತಿಥಿಯಾಗಿದ್ದರು. ಕೆಎನ್ಎಸ್ಎಸ್ ಸುಳ್ಯ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಪದ್ಮನಾಭನ್ ನಾಯರ್ ಮಧುವನ, ಚಂದ್ರಮೋಹನ್, ಶಶಿಧರ ಪಿಳ್ಳೈ ಬಾಲಕೃಷ್ಣನ್ ನಾಯರ್ ನೀರಬಿದಿರೆ, ಪುಷ್ಪಾ ಡಿ ಪ್ರಸಾದ್ ಕಾನತ್ತೂರ್ ಅವರನ್ನು ಸನ್ಮಾನಿಸಲಾಯಿತು.
ಕೆಎನ್ಎಸ್ಎಸ್ ಸುಳ್ಯ ಕರಯೋಗಂ ಕಾರ್ಯದರ್ಶಿ ಶಶಿಧರನ್ ನಾಯರ್ ಉಬರಡ್ಕ, ಖಜಾಂಜಿ ಪ್ರಭಾಕರನ್ ನಾಯರ್, ಕೆಎನ್ಎಸ್ಎಸ್ ಮಹಿಳಾ ಘಟಕದ ಅಧ್ಯಕ್ಷೆ ಭವಾನಿ ಮುಂಡಾತ್ ಬಾರ್ಪಣೆ, ಕಾರ್ಯದರ್ಶಿ ಶೈಲಜಾ ಜಯರಾಜ್ ನೀರಬಿದಿದರೆ, ಖಜಾಂಜಿ ಜ್ಯೋತಿ ಮಧುಸೂಧನ ಉಪಸ್ಥಿತರಿದ್ದರು.

ಕೆಎನ್ಎಸ್ಎಸ್ ಬೋರ್ಡ್ ಸದಸ್ಯರಾದ ಬಾಲಕೃಷ್ಣನ್ ನಾಯರ್ ಎಸ್ಬಿ ಲ್ಯಾಬ್ ಸ್ವಾಗತಿಸಿ, ಭಾಸ್ಕರನ್ ನಾಯರ್ ಮಧುವನ ವಂದಿಸಿದರು. ದುರ್ಗಾಕುಮಾರ್ ನಾಯರ್ಕೆರೆ ಕಾರ್ಯಕ್ರಮ ನಿರೂಪಿಸಿದರು.
ಓಣಂ ಆಚರಣೆಯ ಅಂಗವಾಗಿ ಪೂಕಳಂ,ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ತಿರುವಾದಿರ, ಭರತನಾಟ್ಯಂ, ಶಾಸ್ತ್ರೀಯ ಸಂಗೀತ ಗಾಯನ ಮನಸೂರೆಗೊಂಡಿತು.
ಓಣಂ ಸದ್ಯ ಏರ್ಪಡಿಸಲಾಗಿತ್ತು.





