ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚುವರಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಕಣ್ಗಾವಲು ಏರ್ಪಡಿಸುವ ಭಾಗವಾಗಿ ಜಿಲ್ಲಾ ಪೋಲಿಸ್ ವತಿಯಿಂದ ಈ ಬಾರಿ ಡ್ರೋನ್ ಬಳಕೆ ಮಾಡಿ ನಿರೀಕ್ಷಣೆ ನಡೆಸಲಾಗುತ್ತಿದೆ.ಅಲ್ಲದೇ ಅಲ್ಲಲ್ಲಿ
ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಕಣ್ಗಾವಲು ಇರಿಸಿದೆ.ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಲ್ಲಲ್ಲಿ ಪೋಲಿಸ್ ತಂಡಗಳನ್ನು ಮತ್ತು ಮಫ್ತಿ ತಂಡಗಳನ್ನು ನಿಯೋಜಿಸಲಾಗಿದೆ.ಕಳ್ಳತನ ತಡೆಯುವ ನಿಟ್ಟಿಲ್ಲಿ ವಿಷೇಷ ಕಣ್ಗಾವಲು ಇರಿಸಲಾಗಿದ್ದು ಮಕ್ಕಳು ಸಾರ್ವಜನಿಕರು ಜಾತ್ರೋತ್ಸವಕ್ಕೆ ಬರುವ ಸಂಧರ್ಭದಲ್ಲಿ ಚಿನ್ನಭಾರಣಗಳನ್ನು ಧರಿಸಿ ಬರುವುದು ಕಡಿಮೆ ಮಾಡಬೇಕು ಎಂದು ಪೋಲಿಸ್ ಇಲಾಖೆ ಸೂಚಿಸಿದೆ.
ವಾಹನಗಳನ್ನು ನಿಗದಿ ಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ಸೂಚಿಸಿದೆ. ಪಾರ್ಕಿಂಗ್ಗೆ ಸೂಚಿಸಿದ ಸ್ಥಳಗಳಾದ ಪ್ರಭು ಗ್ರೌಂಡ್ , ಎಪಿಎಂಸಿ ಗ್ರೌಂಡ್, ಗಾಂಧಿನಗರ ಶಾಲಾ ಮೈದಾನ ಮತ್ತಿತರರು ಕಡೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಸ್ಥಳ ನಿಗದಿ ಪಡಿಸಲಾಗಿದೆ. ತುರ್ತು ಸಂಧರ್ಭದಲ್ಲಿ ಸಾರ್ವಜನಿಕರು 112 ಗೆ ಕರೆ ಮಾಡಬಹುದು ಎಂದು ಸುಳ್ಯ ಉಪನಿರೀಕ್ಷಕ ಸಂತೋಷ್ ಬಿ.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












