ಚಿತ್ರಗಳು:ನವೀನ್, ಸ್ಟುಡಿಯೋ ಗೋಪಾಲ್.
ಸುಳ್ಯ:ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ ಕಾರ್ಯಕ್ರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು




ನೆರೆದ ಜನರ ಮನಸೂರೆಗೊಂಡಿತು.
ಡಿ.26ರಂದು ಉಡುಪಿಯ ಕಲಾಮಯಂ ಇವರಿಂದ ಜನಪದ ಕಲೆಗಳ ಅನಾವರಣ, ಜಾನಪದ ನೃತ್ಯ ಸಂಗೀತ ಮತ್ತು ವಾದ್ಯ ಪರಿಕರಗಳ ಸಮ್ಮಿಲನ ಜಾನಪದ ವೈಭವ ಮನ ಸೆಳೆಯಿತು. ಸಂಜೆ ಆರಂಭಿಕ ಮನೋರಂಜನಾ ಕಾರ್ಯಕ್ರಮದಲ್ಲಿ

ಚಿತ್ರಗಳು:ನವೀನ್, ಸ್ಟುಡಿಯೋ ಗೋಪಾಲ್.



ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.
ಹಬ್ಬದ ಮೊದಲ ದಿನ ಡಿ.25ರಂದು ಸಂಜೆ ಸುಳ್ಯದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು. ರಾತ್ರಿ ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಕುಮಾರ ವೈಭವ’ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.














