ಸುಳ್ಯ:2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ರಸ್ತೆ ಅಭಿವೃದ್ಧಿಗೆ 75 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಹಂಚಿಕೆಯಾಗಿರುವ ಅನುದಾನದಡಿ ಒಟ್ಟು 8 ಕಾಮಗಾರಿಗಳು
ಅನುಮೋದನೆಗೊಂಡಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು
ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.
ಕಾಮಗಾರಿಗಳ ವಿವರ:
ಸುಳ್ಯ ತಾಲೂಕು ಎಡಮಂಗಲ ಗ್ರಾಮದ ಡೆಮ್ಮಾಯಿಲ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಮುಳಿಯಡ್ಕ-ವಾಲಾಜೆ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 15ಲಕ್ಷ, ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಕೊಡ್ಲುಗುಳಿ-ಪಾರೆ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೂಟೇಲು ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗಡ 10ಲಕ್ಷ,
ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ನೆತ್ತಾರು ಗುಂಡಿ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಕಡಬ ತಾಲೂಕು ಎಡಮಂಗಲ ಗ್ರಾಮದ ಆಲೆಕ್ಕಾಡಿ-ನೂಜಾಡಿ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 6 ಲಕ್ಷ, ಸುಳ್ಯ ತಾಲೂಕು ಮುರುಳ್ಯ ಗ್ರಾಮದ ನವಗ್ರಾಮ ಪ್ರಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 6 ಲಕ್ಷ, ಸುಳ್ಯ ತಾಲೂಕು ಐವನಾಡು ಗ್ರಾಮದ ಶ್ರೇಣಿ-ಅಜ್ಜಮೂಲೆ ಕೃಷಿ ಕಾಲೋನಿ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 8 ಲಕ್ಷ ಸೇರಿ ಒಟ್ಟು 75.00 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.







