ಸುಳ್ಯ:54ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ ನಾಳೆಯಿಂದ (ಸೆ.29ರಂದು)ಅ.7ರ ವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೂ ಶಾರದಾಂಬ ಕಲಾ ವೇದಿಕೆಯಲ್ಲಿ ನಡೆಯಲಿದೆ. ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ಶ್ರೀ ಶಾರದಾಂಬ
ದಸರಾ ಸೇವಾ ಟ್ರಸ್ಟ್, ಸುಳ್ಯ ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ 9 ದಿನಗಳ ಕಾಲ ಉತ್ಸವ ನಡೆಯಲಿದೆ. ನಾಳೆ (ಸೆ.29ರಂದು) ಬೆಳಿಗ್ಗೆ 10.12ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ. ಸುಳ್ಯದ ಲಾಲ್ ಬಹದ್ದೂರ್ ಶಾಸ್ತ್ರೀ ವೃತ್ತದಿಂದ ಅದ್ದೂರಿ ಮೆರವಣಿಯಲ್ಲಿ ಶಾರದೆಯನ್ನು ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಾಂಬ ಕಲಾ ಮಂಟಪಕ್ಕೆ ತಂದು ಅಲ್ಲಿ ದೇವಿಯ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ನಡೆಯಲಿದೆ.
ಸಂಜೆ 3 ಗಂಟೆಯಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಕುಣಿತ ಭಜನೆಯೊಂದಿಗೆ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ರಾತ್ರಿ 7.30 ಕ್ಕೆ ಕೆ.ಸತೀಶ್ ಆಚಾರ್ಯ ಮತ್ತು ಬಳಗ ಕಲಾಕೇಸರಿ ಜಾಲ್ಸೂರು ಇವರಿಂದ ಭಕ್ತಿಗಾನ ಸುಧಾ ನಡೆಯುವುದು.

ಸೆ.30ರಂದು ಮಹಿಳಾ ದಸರಾ ನಡೆಯಲಿದೆ. ಸಂಜೆ ಭಜನಾ ಕಾರ್ಯ ಕ್ರಮ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಬೆಟ್ಟಂಪಾಡಿ ಇವರಿಂದ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯ ಕಲಾವಿದರಿಂದ ನೃತ್ಯ ಸಂಗಮ ಮತ್ತು ನೃತ್ಯ ರೂಪಕ – ಶ್ರೀನಿವಾಸ ಕಲ್ಯಾಣ ನಡೆಯುವುದು.
ಅ.1ರಂದು ಬೆಳಗ್ಗೆಯಿಂದ ಆಯುಧ ಪೂಜೆ ನಡೆಯುವುದು. ಸಂಜೆ ಭಜನಾ ಕಾರ್ಯಕ್ರಮದಲ್ಲಿ ಶ್ರೀ ವಿಷ್ಣು ಭಜನಾ ಮಂಡಳಿ ಕಾಯರ್ತೋಡಿ ಇವರಿಂದ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಳೆ ಚಿತ್ರಗೀತೆಗಳ ಸಂಘಮ ನೆನಪು ನೀನಾದ ನಡೆಯಲಿದೆ.
ಅ.2ರಂದು ಬೆಳಗ್ಗೆ 6.41ರಿಂದ ಅಕ್ಷರಾಭ್ಯಾಸ ನಡೆಯುವುದು. ಸಂಜೆ ಭಜನೆ ಶ್ರೀ ಮಿತ್ತೂರು ಉಳ್ಳಾಕುಳು ಮಹಿಳಾ ಭಜನಾ ಮಂಡಳಿ ಅಮೈ ಮಡಿಯಾರು ಉಬರಡ್ಕ ಇವರಿಂದ. ಸಂಜೆ ಎಸ್.ಜಿ. ಎಂಟರ್ಟೈನರ್ಸ್ ಹೆಜ್ಜೆನಾದ ಹಾಗೂ ಎಸ್.ಕೆ. ಡ್ಯಾನ್ಸ್ ಸ್ಟುಡಿಯೋ ಅರ್ಪಿಸುವ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಅ.3ರಂದು ಮಕ್ಕಳ ದಸರಾ – 2025 ನಡೆಯುವುದು.ಸಂಜೆ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಸದಾಶಿವ ಭಜನಾ ಸಂಘ ಆಲೆಟ್ಟಿ ಇವರಿಂದ ಸಂಜೆ ಜಿಲ್ಲೆಯ ಹೆಸರಾಂತ ನೃತ್ಯ ತಂಡ ಮಂಜು ಬ್ರದರ್ಸ್ ಸುಳ್ಯ, ರಂಗ ಮಯೂರಿ ಕಲಾ ಶಾಲೆ ಸುಳ್ಯ, ಪ್ಯೂಶನ್ ಇನ್ಸಿಟ್ಯೂಟ್ ಆಪ್ ಡ್ಯಾನ್ಸ್ ಸುಳ್ಯ, ಎಕ್ಸ್ಟಸಿ ಡ್ಯಾನ್ಸ್ ಕ್ರಿವ್ ಸುಳ್ಯ, ಡಿ ‘ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇವರಿಂದ ನೃತ್ಯೋತ್ಸವ.
ಅ.4ರಂದು ಸಂಜೆ ಸಾಮೂಹಿಕ ಪ್ರಾರ್ಥನೆ ದೀಪಾರಾಧನೆ,
ಸ್ವಸ್ತಿ ಪುಣ್ಯಾಹ ಅಗ್ನಿ ಪ್ರತಿಷ್ಠೆ. ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಹಾಗೂ ಮಾತೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯುವುದು. ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಇವರ ಸಹಕಾರದಲ್ಲಿ.
ಅ.5ರಂದು ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವದೂತೆ ಗುಳಿಗೆ ಖ್ಯಾತಿಯ ಕಲಾ ಸಂಗಮದ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಚಾರಿತ್ರಿಕ ತುಳು ನಾಟಕ ಛತ್ರಪತ್ರಿ ಶಿವಾಜಿ.
ಆಗಸ್ಟ್ 6 ರಂದು, ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ನಡೆಯುವುದು. ರಾತ್ರಿ ಶ್ರುತಿ ಗಾಯನ ಮೆಲೋಡಿಸ್ ಅರ್ಪಿಸುವ ಖ್ಯಾತ ಹಿನ್ನೆಲೆ ಗಾಯಕ ಸರಿಗಮಪ ಜೂರಿ ಪ್ಯಾನಲ್ ನಿರ್ಣಾಯಕರಾದ ಅಜಯ್ ವಾರಿಯರ್, ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಹಾಗೂ ಅಖಿಲ ಪಜಿಮಣ್ಣು, ಎದೆತುಂಬಿ ಹಾಡುವೆನು ಖ್ಯಾತಿಯ ಪಲ್ಲವಿ ಪ್ರಭು, ಸ್ಟಾರ್ ನೈಟ್ ಸರದಾರ ಸುಪ್ರೀತ್ ಸಾಪಲಿಗ, ಕೇರಳದ ಹೆಮ್ಮೆಯ ಗಾಯಕ ಗೌತಮ್ ಭಾಸ್ಕರ್ ಇವರೆಲ್ಲರ ಸಮಾಗಮದಲ್ಲಿ ಅದ್ದೂರಿ ಸಂಗೀತ ರಸಮಂಜರಿ ಮ್ಯೂಸಿಕ್ ಹಂಗಾಮ ನಡೆಯುವುದು. ಶ್ರೀದೇವಿಗೆ ವಿಶೇಷ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಲಿದೆ.
ಅ.7ರಂದು ಶ್ರೀ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆಯು ನಡೆಯುವುದು. ವಿಶೇಷ ಅಲಂಕಾರದೊಂದಿಗೆ, ವಿದ್ಯುತ್ ದೀಪಗಳಿಂದ ಅಲಕೃಂತಗೊಂಡ ಶ್ರೀ ದೇವಿಯ ಶೋಭಾಯಾತ್ರೆಯು ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಜಲಸ್ತಂಬನಗೊಳ್ಳಲಿದೆ.





