ಸುಳ್ಯ:ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದ ಅಂಗವಾಗಿ
ಅದ್ದೂರಿ ಸಂಗೀತ ರಸಮಂಜರಿ ಕಾರ್ಯಕ್ರಮ ಮೋಡಿ ಮಾಡಿತು. ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿನ್ನಲೆ ಗಾಯಕರಾದ ಗುರುಕಿರಣ್ ನೇತೃತ್ವದಲ್ಲಿ ಜನಪ್ರಿಯ ಚಲನಚಿತ್ರ ಹಿನ್ನಲೆ ಗಾಯಕರು ಭಾಗವಹಿಸಿದ ಸಂಗೀತ ಸೌರಭ ಅಕ್ಷರಷಃ ಮನಸೂರೆಗೊಂಡಿತು.ಸಂಗೀತ ರಸ ಮಂಜರಿ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.
ಶಾರದಾಂಬ ವೇದಿಕೆ ಹಾಗೂ ಪರಿಸರವಿಡೀ ಸಂಗೀತ ಪ್ರಿಯರು ತುಂಬಿ ತುಳುಕಿದ್ದು ನೆರೆದ ಸಾವಿರಾರು ಮಂದಿಗೆ ಜನಪ್ರಿಯ ಗಾಯಕರು ಸಂಗೀತ ರಸದೌತಣ ಉಣ ಬಡಿಸಿದರು. ಚಲನಚಿತ್ರ ಹಿನ್ನಲೆ ಗಾಯಕರಾದ ದರ್ಶನ್ ನಾರಾಯಣ್, ಅಮಿಶ್ ಕುಮಾರ್, ಶಿವಾನಿ ನವೀನ್, ಐಶ್ವರ್ಯ ರಂಗರಾಜನ್, ಅರ್ಫಾಜ್ ಉಳ್ಳಾಳ್ ಮತ್ತಿತರ ಗಾಯಕರು ಹಾಡುಗಳನ್ನು ಹಾಡಿ ನೆರೆದ ಪ್ರೇಕ್ಷರನ್ನು ರಂಜಿಸಿದರು.