ಸುಳ್ಯ:ಸುಳ್ಯ ದಸರಾ ಉತ್ಸವ ಸಮಿತಿ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ಶಾರದಾಂಬಾ ಸಮೂಹ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ದಸರಾ ಉತ್ಸವದ ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಿತು. ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಶಾರದಾಂಬ ಉತ್ಸವ ಸಮಿತಿಯ
ಅಧ್ಯಕ್ಷರಾದ ಡಾ. ಲೀಲಾಧರ್ ಡಿ.ವಿ, ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ ಅವರು 54ನೇ ವರ್ಷದ ಶಾರದಾಂಬ ಉತ್ಸವ ಸುಳ್ಯ ದಸರಾದ ಸಿದ್ಧತೆಗಳ ಬಗ್ಗೆ ಹಾಗೂ ತುರ್ತು ಆಗಬೇಕಾದ ಸಿದ್ಧತೆಗಳ ಬಗ್ಗೆ ವಿವರಿಸಿದರು. ಸೆ.29ರಂದು ಪ್ರಾರಂಭಗೊಂಡು ಅ.07ರ ವರೆಗೆ 9ದಿನಗಳ ಕಾಲ ಅದ್ದೂರಿ ಸುಳ್ಯ ದಸರಾ ನಡೆಯಲಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜನೆ, ಶೋಭಾ ಯಾತ್ರೆಯ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು.ಸಭೆಯಲ್ಲಿ ದಸರಾ ಉತ್ಸವದಲ್ಲಿ ವಿವಿಧ ಸಮಿತಿಗಳು ನಡೆಸಬೇಕಾದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಯಿತು.

ನಾರಾಯಣ ಕೇಕಡ್ಕ ಮಾತನಾಡಿ ಪ್ರತಿ ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 7 ಗಂಟೆಗೆ ಸರಿಯಾಗಿ ಆರಂಭಗೊಳ್ಳಲಿದೆ.ಅ.7ರಂದು ನಡೆಯುವ ಶೋಭಾ ಯಾತ್ರೆ ಸರಿಯಾಗಿ 3ಗಂಟೆಗೆ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಡಲಿದೆ. ಸಮಯ ಪಾಲನೆಗೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕು. ಎಲ್ಲಾ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಮುಗಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ರಾಜು ಪಂಡಿತ್ ಮಾತನಾಡಿ ಶಾರದಾಂಬಾ ಕಲಾವೇದಿಕೆಯ ನಿರ್ಮಾಣ, ಆಮಂತ್ರಣ ಹಂಚುವ ಕೆಲಸ ಕಾರ್ಯಗಳ ಕುರಿತು ವಿವರಿಸಿದರು.
ಡಾ.ಲೀಲಾಧರ್ ಡಿ.ವಿ.ಮಾತನಾಡಿ ಸುಳ್ಯ ದಸರಾ ಉತ್ಸವದ ಯಶಸ್ವಿಗೆ ಎಲ್ಲರ ಪ್ರಯತ್ನ, ಸಹಕಾರ ಬೇಕು. ಎಲ್ಲರೂ ಒಟ್ಟಾಗಿ ಕಾರ್ಯಕ್ರಮದ ಯಶಸ್ವಿಗೆ ಪ್ರಯತ್ನ ನಡೆಸಬೇಕಾಗಿದೆ ಎಂದರು.

ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷೆ ಲತಾ ಮಧುಸೂಧನ್, ಗೌರವಾಧ್ಯಕ್ಷೆ ಡಾ.ಯಶೋಧಾ ರಾಮಚಂದ್ರ,ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಜಿ ಸುನಿಲ್ ಕೇರ್ಪಳ, ಶಾರದಾಂಬಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಬೆಳ್ಯಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಶಾರದಾಂಬ ಸಮೂಹ ಸಮಿತಿಗಳ ಎಲ್ಲಾ ಪದಾಧಿಕಾರಿಗಳಾದ ಗಣೇಶ್ ಆಳ್ವ, ಶಿವನಾಥ ರಾವ್, ಬಾಲಕೃಷ್ಣನ್ ಎಸ್ಬಿ ಲ್ಯಾಬ್, ರಾಜೇಶ್, ರವಿಚಂದ್ರ ಕೊಡಿಯಾಲಬೈಲು, ರಮೇಶ್ ರೈ ಬೂಡು, ಕೃಷ್ಣ ಬೆಟ್ಟ, ವಿನಯ ಬೆದ್ರುಪಣೆ, ಶಿಲ್ಪಾ ಸುದೇವ್, ಜಿನ್ನಪ್ಪ ಪೂಜಾರಿ, ಚಂದ್ರಶೇಖರ ಪಂಡಿತ್, ನವೀನ್ ಎಲಿಮಲೆ, ಪ್ರಕಾಶ್ ಯಾದವ್, ಕೌಶಲ್, ಕುಸುಮಾಧರ ಬೂಡು, ಪ್ರದೀಪ್, ಜಯಾ ಕೃಷ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.





