ಸುಳ್ಯ:54ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ ಕಾರ್ಯಕ್ರಮ ಸೆ.29 ರಿಂದ ಅ.7ರ ತನಕ ನಡೆಯಲಿದೆ. ದಸರಾ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಿತು. ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭಹಾರೈಸಿದರು. ಶಾಸಕಿ ಭಾಗೀರಥಿ ಮುರುಳ್ಯ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ ಗೋಕುಲ್ದಾಸ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ , ಕೋಶಾಧಿಕಾರಿ ಅಶೋಕ್ ಪ್ರಭು, ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಜಿ ಬೂಡು ರಾಧಾಕೃಷ್ಣ ರೈ , ಕಾರ್ಯದರ್ಶಿ ಎಂ.ಕೆ.ಸತೀಶ್ , ಸದಸ್ಯರಾದ ತೀರ್ಥರಾಮ ಜಾಲ್ಸೂರು, ಜನಾರ್ಧನ ದೋಳ, ಶಾರದಾಂಬಾ ಮಹಿಳಾ ಸಮಿತಿ ಗೌರವಾಧ್ಯಕ್ಷೆ ಯಶೋಧಾ ರಾಮಚಂದ್ರ, ಅಧ್ಯಕ್ಷೆ ಲತಾ ಮಧುಸೂಧನ್ , ಶಾರದಾಂಬಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ , ದಸರಾ ಉತ್ಸವ ಸಮಿತಿ ಖಜಾಂಜಿ ಸುನಿಲ್ ಕೇರ್ಪಳ , ಪ್ರಮುಖರಾದ ಚೇತನ್ ಕಜೆಗದ್ದೆ , ಭವಾನಿಶಂಕರ್ ಕಲ್ಮಡ್ಕ , ಎಂ ವೆಂಕಪ್ಪ ಗೌಡ , ರಾಧಾಕೃಷ್ಣ ಬೊಳ್ಳೂರು, ಮಧುಸೂಧನ ಕುಂಭಕ್ಕೋಡು, ಕೃಪಾಶಂಕರ ತುದಿಯಡ್ಕ, ಭಾರತಿ ಪುರುಷೋತ್ತಮ , ತೀರ್ಥಕುಮಾರ್ ಕುಂಚಡ್ಕ, ಅನೂಪ್ ಪೈ, ಸನತ್.ಪಿ.ಆರ್, ಡಾ.ಪುರುಷೋತ್ತಮ ಕೆ.ಜಿ, ಹರೀಶ್ ರೈ ಉಬರಡ್ಕ, ಹರಿರಾಯ ಕಾಮತ್ , ಗಣೇಶ್ ಆಳ್ವ, ಪ್ರಭಾಕರನ್ ನಾಯರ್, ರವಿಚಂದ್ರ ಕೊಡಿಯಾಲಬೈಲು, ವಿನಯ್ ಬೆದ್ರುಪಣೆ, ಚಂದ್ರಶೇಖರ ಪಂಡಿತ್, ಶಿವನಾಥ್ ರಾವ್, ಮಹಾಬಲ ರೈ, ರಜತ್ ಅಡ್ಕಾರ್, ಬೆಳ್ಯಪ್ಪ ಗೌಡ ಬಳ್ಳಡ್ಕ, ರಾಜೇಶ್, ಅವಿನ್ ಬೆಟ್ಟಂಪಾಡಿ, ಕುಸುಮಾಧರ ರೈ ಬೂಡು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.












